
ಕಸ್ತೂರಿ ರಂಗನ್ ವರದಿ ಈಗಿನ ರೂಪದಲ್ಲಿ ಒಪ್ಪಲು ಸಾಧ್ಯವಿಲ್ಲ: ಹರತಾಳು ಹಾಲಪ್ಪ
ಕಸ್ತೂರಿ ರಂಗನ್ ವರದಿಯನ್ನು ಈಗಿನ ರೂಪದಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದ್ದಾರೆ. ವರದಿ ಕಾಂಗ್ರೆಸ್ ಅವಧಿಯಲ್ಲಿ ರೂಪುಗೊಂಡದ್ದು ಎಂದು ಹೇಳಿದ ಅವರು, ಮಲೆನಾಡಿನ ರೈತರು, ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ತೊಂದರೆ ಆಗದಂತೆ ಕೇರಳ ಮಾದರಿಯಲ್ಲಿ ಜಂಟಿ ಸರ್ವೇ ನಡೆಸಬೇಕು ಎಂದು ಒತ್ತಾಯಿಸಿದರು.









