ಹೊಸನಗರ ; ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿನ ಸಮಸ್ಯೆ ಇತ್ಯರ್ಥಪಡಿಸುವಂತೆ ಶಿಕ್ಷಕರಿಂದ ಮನವಿ

Written by Mahesha Hindlemane

Published on:

ಹೊಸನಗರ ; ರಾಜ್ಯ ಕಾಂಗ್ರೆಸ್ ಸರ್ಕಾರ ಸೆ. 22 ರಿಂದ ಅ. 7ರವರೆಗೆ ಶಿಕ್ಷಕರನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಗಣತಿಗಾಗಿ ಶಿಕ್ಷಕರನ್ನು ನೇಮಿಸಲಾಗಿದ್ದು ಆ ಶಾಲೆಯಲ್ಲಿ ಆ ಭಾಗದಲ್ಲಿ ಕೆಲಸ ಮಾಡುವ ಶಿಕ್ಷಕರನ್ನು ಬೇರೆ-ಬೇರೆ ಗ್ರಾಮಗಳಿಗೆ ನಿಯೋಜನೆ ಮಾಡಿರುವುದು ಒಂದು ತೊಂದರೆಯಾದರೆ ವಿದ್ಯುತ್ ಮೀಟರ್ ನಂಬರ್ ಹಾಕಿರುವ ಮನೆಯೇ ಬೇರೆ ಸಮೀಕ್ಷೆಯಲ್ಲಿ ತೋರಿಸಿರುವ ಮನೆಯೇ ಬೇರೆ-ಬೇರೆಯಾಗಿದ್ದು ನಮಗೆ ಗುರುತಿನ ಚೀಟಿಯಲ್ಲಿರುವ ಮನೆಯ ಯಾಜಮಾನನ ಫೋನ್ ನಂಬರ್ ನೀಡಿ ಎಂದು ಗ್ರೇಡ್2 ತಹಸೀಲ್ದಾರ್ ರಾಕೇಶ್‌ ಬ್ರಿಟ್ಟೋರಿಗೆ ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರು ಮನವಿ ಪತ್ರ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಶಿಕ್ಷಕ ಮೇಘರಾಜ್‌, ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಮ್ಮ ತಾಲ್ಲೂಕಿನ ಶಿಕ್ಷಕರನ್ನು ನಿಯೋಜನೆ ಮಾಡಿದ್ದು ಸರಿಯಷ್ಟೆ, ಆದರೆ ಈ ಗಣತಿದಾರ ಶಿಕ್ಷಕರು ಹತ್ತು ಹಲವು ಸಮಸ್ಯೆಯನ್ನು ಎದುರಿಸಬೆಕಾಗಿದ್ದು ಸಮೀಕ್ಷಾ ಅಪ್ಲಿಕೇಶನ್ ಕಾರ್ಯನಿರ್ವಹಿಸದೇ ಇರುವುದರಿಂದ ಜೀಯೋ ಟಾಗ್ ಮೂಲಕ ಮನೆಗಳನ್ನು ಹುಡುಕುವುದು ಕಷ್ಟಕರವಾಗಿದೆ. ಹೀಗಾಗಿ ಮನೆಯ ಯಜಮಾನರ ಹೆಸರುಳ್ಳ ಪಟ್ಟಿ ನೀಡಬೇಕು. ಗಣತಿದಾರರಿಗೆ ತಮ್ಮ ಶಾಲೆ ವ್ಯಾಪ್ತಿಯಲ್ಲಿಯೇ ನಿಯೋಜಿಸದೇ ಬೇರೆಡೆಗೆ ನಿಯೋಜಿಸಿರುವುದರಿಂದ ಶಿಕ್ಷಕರಿಗೆ ಮನೆಗಳನ್ನು ಹಡುಕುವುದು ಕಷ್ಟಕರವಾಗಿದೆ. ಈ ಸಮೀಕ್ಷ ಕಾರ್ಯಕ್ಕೆ ಬಿಎಲ್‌ಒಗಳನ್ನು ನಿಯೋಜಿಸಿದ್ದು ಉಳಿದ ಶಿಕ್ಷಕರನ್ನು ನಿಯೋಜಿಸದೇ ಇರುವುದು ಎಷ್ಟು ಸರಿಯೆಂದು ಪ್ರಶ್ನಿಸಿದ್ದು ಜಿಪಿಎಸ್ ಟ್ರಾಕಿಂಗ್‌ನಲ್ಲಿ ನೋಡಿದಾಗ ಒಬ್ಬ ಶಿಕ್ಷಕರಿಗೆ ಬೇರೆ-ಬೇರೆ ಪಂಚಾಯಿತ್ ವ್ಯಾಪ್ತಿಯ ಗ್ರಾಮಗಳು ಸಿಗುತ್ತಿರುವುದು ಗಣತಿದಾರರಿಗೆ 150 ಮನೆಗಳ ಬದಲಿಗೆ 100 ಮನೆಗಳಿಗೆ ಇಳಿಕೆ ಮಾಡಿದರೆ ಒಳ್ಳೆಯದು. ಈ ರೀತಿ ಸಮೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದನ್ನು ತಕ್ಷಣ ಸರ್ಕಾರ ಬಗೆಹರಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ನಿಯೋಜನೆಗೊಂಡ ಶಿಕ್ಷಕರಾದ ಮೇಘರಾಜ್ ಸುಜಾತ, ವೆಂಕಟೇಶ್, ಪ್ರೇಮ, ಮಮತಾ, ಕೌಶಲ್ಯ, ಸಿದ್ದೇಶಪ್ಪ, ಸುರೇಶ್, ಮಾಹಾಂತೇಶ್, ಪ್ರೇಮಾ, ನಾಗರಾಜ್, ಮಮತ, ಸಾವಿತ್ರಿ, ಧರ್ಮಪ್ಪ, ಗಂಗಾಧರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment