ತೀರ್ಥಹಳ್ಳಿಯ ಹೆಸರಾಂತ ಶ್ರೀ ರಾಮೇಶ್ವರ ದೇವಾಲಯದಲ್ಲಿ ಕಳ್ಳತನ : ಭಕ್ತರ ಆಕ್ರೋಶ

Written by Koushik G K

Updated on:

ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಹಾಗೂ ಭಕ್ತರ ನಂಬಿಕೆಯ ಕೇಂದ್ರವಾದ ಶ್ರೀ ರಾಮೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಕಳ್ಳತನದ ಘಟನೆ ಭಕ್ತರಲ್ಲಿ ಆಘಾತವನ್ನು ಉಂಟುಮಾಡಿದೆ. ಈ ಘಟನೆದಲ್ಲಿ ಸುಮಾರು ಮೂವತ್ತು ಸಾವಿರ ರೂಪಾಯಿಗೂ ಹೆಚ್ಚು ಹಣ ದೋಚಲ್ಪಟ್ಟಿದ್ದು, ದೇವಾಲಯ ಸಮಿತಿ ಹಾಗೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://www.facebook.com/share/v/1C99AndBMG/

ಪೊಲೀಸ್ ಮೂಲಗಳಿಂದ ತಿಳಿದುಬಂದ ಮಾಹಿತಿಯ ಪ್ರಕಾರ, ಕಳ್ಳನು ರಾತ್ರಿ ಹೊತ್ತು ದೇವಾಲಯದ ಹಿಂಭಾಗದ ಮಾರ್ಗವನ್ನು ಬಳಸಿ ಅನ್ನದಾಸೋಹ ಕೊಠಡಿಗೆ ನುಗ್ಗಿದ್ದಾನೆ. ಅಲ್ಲಿ ಇದ್ದ ಬೀರಿನ ಬಾಗಿಲನ್ನು ಕಬ್ಬಿಣದ ಸಾಧನಗಳಿಂದ ಒಡೆದು ಒಳಗೆ ಪ್ರವೇಶಿಸಿದ್ದಾನೆ. ಒಳಗೆ ಪ್ರವೇಶಿಸಿದ ನಂತರ ಕಾಣಿಕೆ ಹುಂಡಿಯನ್ನು ಗುರಿಯಾಗಿಸಿ, ಅದರಲ್ಲಿದ್ದ ನಗದು ಹಣವನ್ನು ಕದ್ದೊಯ್ದಿದ್ದಾನೆ.

ಅಲ್ಲದೇ, ಅನ್ನದಾಸೋಹ ಕೊಠಡಿಯಲ್ಲಿ ಇಟ್ಟಿದ್ದ ಸಣ್ಣ ಕಾಣಿಕೆ ಹುಂಡಿಯನ್ನೂ ಸಂಪೂರ್ಣವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾಗಳ ತೊಂದರೆ

ಘಟನಾ ಸ್ಥಳದಲ್ಲಿ ಸ್ಥಾಪಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಕಳ್ಳನು ತಿರುಗಿಸಿ ಇಟ್ಟಿದ್ದಾನೆ. ಇದು ಕಳ್ಳತನಕ್ಕೆ ಮುಂಚಿತವಾದ ಯೋಜನೆ ಇದ್ದಿತೆಂಬ ಅನುಮಾನವನ್ನು ಹೆಚ್ಚಿಸಿದೆ. ದೇವಾಲಯದ ಒಳಭಾಗದಲ್ಲಿ ಕಳ್ಳನ ಸ್ಪಷ್ಟ ದೃಶ್ಯ ಸಿಗದಂತೆ ಮಾಡುವ ಉದ್ದೇಶದಿಂದಲೇ ಕ್ಯಾಮೆರಾವನ್ನು ಬದಲಾಯಿಸಿದ್ದಾನೆ ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.

ಹಿಂದೆಯೂ ನಡೆದಿತ್ತು ಕಳ್ಳತನ ಯತ್ನ

ಸ್ಥಳೀಯರ ಪ್ರಕಾರ, ಇದೇ ದೇವಾಲಯದ ಪಕ್ಕದಲ್ಲಿರುವ ಇನ್ನೊಂದು ಚಿಕ್ಕ ದೇವಾಲಯದಲ್ಲಿ ಕೆಲವು ವಾರಗಳ ಹಿಂದೆ ಬಾಗಿಲು ಮುರಿದು ಕಳ್ಳತನ ಯತ್ನ ನಡೆದಿದೆ. ಆದರೆ, ಅಲ್ಲಿ ಹೆಚ್ಚಿನ ಹಣ ಅಥವಾ ಬೆಲೆಬಾಳುವ ವಸ್ತುಗಳು ದೊರೆಯದ ಕಾರಣ ಆ ಯತ್ನ ವಿಫಲವಾಗಿತ್ತು. ಈಗ ಅದೇ ಕಳ್ಳ ಅಥವಾ ತಂಡ ಈ ಕೃತ್ಯ ನಡೆಸಿರಬಹುದೆಂಬ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯ ದೃಶ್ಯ ಸೆರೆಯಾದುದು

ಘಟನೆಯ ರಾತ್ರಿ ರಥಬೀದಿಯ ವೆಂಕಟರಮಣ ಸ್ವಾಮಿ ದೇವಾಲಯದ ಸಿಸಿಟಿವಿ ದೃಶ್ಯಗಳಲ್ಲಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಅಸಹಜವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನ ಚಿತ್ರಣ ಸೆರೆಯಾಗಿದೆ. ಈ ವ್ಯಕ್ತಿಯ ಚಲನವಲನಗಳು ಅನುಮಾನಾಸ್ಪದವಾಗಿದ್ದು, ಪೊಲೀಸರು ಆ ದೃಶ್ಯಾವಳಿಯನ್ನು ಆಧರಿಸಿ ತನಿಖೆ ಮುಂದುವರೆಸುತ್ತಿದ್ದಾರೆ.

Leave a Comment