ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ 5 ಹೊಸ ವೈದ್ಯರ ನೇಮಕ

Written by Koushik G K

Published on:

ತೀರ್ಥಹಳ್ಳಿ:ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿನ ವೈದ್ಯರ ವರ್ಗಾವಣೆ ಭಾರೀ ಚರ್ಚೆಗೆ ಕಾರಣವಾಗಿದ್ದರ ನಡುವೆ ರಾಜ್ಯ ಸರ್ಕಾರ 5 ಹೊಸ ವೈದ್ಯರನ್ನು ನೇಮಕಗೊಳಿಸಿರುವ ಮಹತ್ವದ ಆದೇಶ ನೀಡಿದೆ. ಈ ಮೂಲಕ ಆರೋಗ್ಯ ಸೇವೆಗಳನ್ನು ಪುನಃ ಸಮರ್ಪಕವಾಗಿ ಸ್ಥಾಪಿಸಲು ಕ್ರಮ ಕೈಗೊಂಡಿದೆ.

WhatsApp Group Join Now
Telegram Group Join Now
Instagram Group Join Now

ಈ ನೇಮಕಾತಿಯಲ್ಲಿ ಮೂವರು ವೈದ್ಯರು ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆಯಾಗಿದ್ದು, ಉಳಿದ ಇಬ್ಬರು ವರ್ಗಾವಣೆಯ ಮೂಲಕ ನೇಮಕಗೊಂಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಶಿವಕುಮಾರ್ ಕೆ.ಬಿ. ಅವರು ಜುಲೈ 7ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.

ನೇಮಕಗೊಂಡ ವೈದ್ಯರು ಈ ಕೆಳಗಿನಂತಿದ್ದಾರೆ:

  1. ಡಾ. ಕೆ. ನಾಗೇಶ್ ಕುಮಾರ್ – ದಂತ ತಜ್ಞ
  2. ಡಾ. ಸುಪ್ರೀತ್ – ಮಕ್ಕಳ ತಜ್ಞ
  3. ಡಾ. ವಿನಯ್ – ಅರವಳಿಕೆ ತಜ್ಞ
  4. ಡಾ. ಕವಿತಾ – ಇ.ಎನ್.ಟಿ ತಜ್ಞ
  5. ಡಾ. ಗಣೇಶ್ ನಾಯಕ್ – ಮೂಳೆ ತಜ್ಞ

ಕಣ್ಣಿನ ತಜ್ಞರ ನೇಮಕಾತಿ ಬಾಕಿ ಉಳಿದಿದ್ದು ಅಲ್ಲದೆ, ಅನೇಕ ನರ್ಸ್‌ಗಳೂ ಸಹ ವರ್ಗಾವಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಗ್ಯ ವ್ಯವಸ್ಥೆ ಪುನರ್ ಸ್ಥಾಪನೆಯ ಭರವಸೆ:

ಸ್ಥಳೀಯ ನಾಗರಿಕರು ಹೊಸ ವೈದ್ಯರ ನೇಮಕದಿಂದ ಆಸ್ಪತ್ರೆಯಲ್ಲಿ ಮತ್ತೆ ಉತ್ತಮ ಆರೋಗ್ಯ ಸೇವೆಗಳ ಲಭ್ಯತೆ ಸುಧಾರಣೆಯಾಗಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ.

Leave a Comment