ತೀರ್ಥಹಳ್ಳಿ– ಮಲೆನಾಡಿನ ಪ್ರತಿಷ್ಠಿತ ಸಹ್ಯಾದ್ರಿ ಸಂಸ್ಥೆ 2024-25ನೇ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ರೂ.11 ಕೋಟಿ 64 ಲಕ್ಷ 11 ಸಾವಿರ 745 ಲಾಭ ಗಳಿಸಿದೆ ಎಂದು ಸಂಸ್ಥೆಯ ಮುಖ್ಯಸ್ಥ ಬಸವಾನಿ ವಿಜಯದೇವ್ ತಿಳಿಸಿದ್ದಾರೆ.
ಪಟ್ಟಣದ ಸಹ್ಯಾದ್ರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸ್ಥೆಯು ನಿರಂತರವಾಗಿ ಎ ಶ್ರೇಣಿ ಆಡಿಟ್ ವರದಿ ಪಡೆಯುತ್ತಾ ಬಂದಿದ್ದು, ಈ ಸಾಲಿನಲ್ಲಿ ಒಟ್ಟು ವ್ಯವಹಾರ ರೂ.1,475 ಕೋಟಿಗೂ ಹೆಚ್ಚು ತಲುಪಿದೆ ಎಂದರು.
ಸಾಲ-ಠೇವಣಿ ಹಾಗೂ ವಸೂಲಾತಿ ಪ್ರಗತಿ
ಸಂಸ್ಥೆಯು ಸುಮಾರು ರೂ.104 ಕೋಟಿ 54 ಲಕ್ಷ ಠೇವಣಿ ಹೊಂದಿದ್ದು, ರೂ.140 ಕೋಟಿಗೂ ಅಧಿಕ ಸಾಲ ವಿತರಣೆಯಾಗಿದೆ. ಸಾಲ ವಸೂಲಾತಿ ಶೇ.77% ಪ್ರಗತಿಯನ್ನು ದಾಖಲಿಸಿದೆ ಎಂದು ಅವರು ವಿವರಿಸಿದರು.
ವಿಭಾಗವಾರು ಲಾಭದ ವಿವರ
- ಅಡಿಕೆ ವ್ಯಾಪಾರ: ರೂ.7.89 ಕೋಟಿ
- ಚೀಟಿ ನಿಧಿ ವಿಭಾಗ: ರೂ.3 ಕೋಟಿ ಹೆಚ್ಚು
- ಸಹ್ಯಾದ್ರಿ ಫ್ಯೂಯಲ್ಸ್: ರೂ.40 ಲಕ್ಷ ಹೆಚ್ಚು
- ನಂದಿನಿ ಮಿಲ್ಕ್ ಪಾರ್ಲರ್ ಮತ್ತು ಎಮಿಷನ್ ಟೆಸ್ಟ್: ರೂ.6.30 ಲಕ್ಷ
- ಸರ್ವೋ ಇಂಡಿಯನ್ ಆಯಿಲ್: ರೂ.7.70 ಲಕ್ಷ
- ಸಹ್ಯಾದ್ರಿ ವಾಟರ್ ಪ್ಲಾಂಟ್: ರೂ.8.29 ಲಕ್ಷ
ಇದರ ಜೊತೆಗೆ, ಸಹಕಾರಿದನಿ ವಾರಪತ್ರಿಕೆ ಮತ್ತು ಸಹ್ಯಾದ್ರಿ ಬಸ್ ಸೇವೆ ಮಲೆನಾಡಿನಲ್ಲಿ ಉತ್ತಮ ಖ್ಯಾತಿ ಗಳಿಸಿರುವುದಾಗಿ ಅವರು ಹೇಳಿದರು.
ಸದಸ್ಯರಿಗೆ ಡಿವಿಡೆಂಡ್ ಘೋಷಣೆ
ಈ ಸಾಲಿನಲ್ಲಿಯೂ ಸದಸ್ಯರಿಗೆ ಶೇ.10% ಡಿವಿಡೆಂಡ್ ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಬಸವಾನಿ ವಿಜಯದೇವ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಚಂದ್ರಕಲಾ ಉಪಸ್ಥಿತರಿದ್ದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.