THIRTHAHALLI ; ವಾಹನವೊಂದರ ಬ್ರೇಕ್ ಫೇಲ್ ನಿಂದಾಗಿ ರಸ್ತೆಯ ಎರಡೂ ಬದಿ ಎಲ್ಲಾ ವಾಹನಗಳ ಓಡಾಟಕ್ಕೆ ತೊಂದರೆಯಾಗಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾದ ಘಟನೆ ಶಿವಮೊಗ್ಗ ಜಿಲ್ಲೆಯ ಆಗುಂಬೆ ಘಾಟಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ಭಾಗದಿಂದ ಉಡುಪಿ ಕಡೆ ಹಾಗೂ ಉಡುಪಿ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಕಳೆದ ಕೆಲ ಗಂಟೆಗಳಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

ಇದರ ನಡುವೆಯೇ ಆಂಬ್ಯುಲೆನ್ಸ್ ಗಳು ಸಹ ಓಡಾಟ ನಡೆಸಲು ಪರದಾಟ ನಡೆಸುತ್ತಿವೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ವಾಹನ ಓಡಾಟಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡುತ್ತಿದ್ದಾರೆ.

