HOSANAGARA ; ವಾಲ್ಮೀಕಿ ಜಯಂತಿ ಆಚರಣೆ

Written by malnadtimes.com

Published on:

HOSANAGARA : ಸರ್ಕಾರದ ಸುತ್ತೋಲೆಯಲ್ಲಿ ಹಲವು ಮಹರ್ಷಿಗಳ ಜಯಂತಿ ದೇಶ ಸೇವೆ ಮಾಡಿದವರ ಜಯಂತಿ ಸಾಹಿತಿಗಳ ಜಯಂತಿಗಳಿಗೆ ರಜೆ ನೀಡಿ ಜಯಂತಿ ಆಚರಿಸುತ್ತೇವೆ ಆದರೆ ಸರ್ಕಾರಗಳು ಶಾಲೆ ಕಾಲೇಜ್‌ಗಳಿಗೆ ರಜೆ ನೀಡದೇ ವಿದ್ಯಾರ್ಥಿಗಳನ್ನು ಜಯಂತಿ ಕಾರ್ಯಕ್ರಮಗಳಿಗೆ ಕರೆ ತಂದರೆ ಮಹಾತ್ಮರ ಜಯಂತಿಗೂ ಮಹತ್ವ ಬರುತ್ತದೆ ಮತ್ತು ಮಹತ್ವರ ಬಗ್ಗೆಯು ಅವರಿಗೆ ತಿಳಿಯುತ್ತದೆ ಎಂದು ನಿವೃತ್ತ ಉಪನ್ಯಾಸಕ, ಸಾಹಿತಿ ಡಾ. ಶಾಂತರಾಮ್ ಪ್ರಭು ಹೇಳಿದರು.

WhatsApp Group Join Now
Telegram Group Join Now
Instagram Group Join Now
Vtech THIRTHAHALLI

ಇಲ್ಲಿನ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕು ಆಡಳಿತ ಪಂಚಾಯಿತ್, ಪಟ್ಟಣ ಪಂಚಾಯಿತ್ ಮತ್ತು ಸಮಾಜ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ನಾಯಕ ಸಮಾಜ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿಯನ್ನು ಆದಿಕವಿ ಎಂದೂ ಕರೆಯುತ್ತಾರೆ ಆದಿ ಕವಿ ಎನ್ನುವುದು ಸಂಸ್ಕೃತ ಭಾಷೆಯ ಮೊದಲ ಕವಿಗೆ ಅನುವಾದಿಸುತ್ತದೆ ವಾಲ್ಮೀಕಿ  ಶ್ರೀ ರಾಮನ ವನವಾಸದ ಸಮಯದಲ್ಲಿ ಶ್ರೀರಾಮನೊಂದಿಗೆ ಇದ್ದವರು ಮತ್ತು ನಂತರ ದೇವಿ ಸೀತೆಗೆ ಅವರ ಆಶ್ರಯದಲ್ಲಿ ಆಶ್ರಯ ನೀಡಿದವರು ಮಹರ್ಷಿ ವಾಲ್ಮೀಕಿಯ ಆರಂಭಿಕ ಹೆಸರು ರತ್ನಾಕರ ಈತ ದರೋಡೆಕೋರನಾಗಿದ್ದ ಋಷಿ ನಾರದ ಮುನಿಯಿಂದ ಭಗವಾನ್ ರಾಮನ ಮಹಾನ್ ಭಕ್ತನಾಗಿ ರೂಪಾಂತರಗೊಂಡರು ಎಂದು ವಾಲ್ಮೀಕಿ ರಾಮಾಯಣದ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಚಿದಂಬರ ಉದ್ಘಾಟಿಸಿ ಮಾತನಾಡಿ, ವಾಲ್ಮೀಕಿ ರಾಮಾಯಣ ಜೀವನದಲ್ಲಿ ಒಮ್ಮೆಯಾದರೂ ಓದಬೇಕು ಅದರ ಅರ್ಥ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಹೊಸನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡುತ್ತಿರುವುದು.

ಹೊಸನಗರ ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಎಸ್ ಹೆಚ್.ನಿಂಗಮೂರ್ತಿಯವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಬರಿಯ ಆದಿಕವಿಯಲ್ಲ ಆದರ್ಶ ಕವಿಯಾಗಿ ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆ ಇವರ ಆದರ್ಶ ಜೀವನ ಚರಿತ್ರೆ ಅವರು ನಡೆದು ಬಂದ ದಾರಿ ಇಂದಿನ ಯುವ ಜನರಿಗೆ ಮಾರ್ಗದರ್ಶಕವಾಗಿದ್ದು ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡಾಗ ಎಲ್ಲರೂ ವಾಲ್ಮೀಕಿಯಂತೆ ಆದರ್ಶ ವ್ಯಕ್ತಿಯಾಗಬಹುದು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೇಡ್2ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್. ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ಗೀತಾ ಬಿ.ಎಂ, ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯಪಾಲಕ ಪವನ್‌ಕುಮಾರ್, ರಾಘವೇಂದ್ರ ಸರೋಜಮ್ಮ, ಚಿರಾಗ್,  ಕಲ್ಪನಾ, ರೇಣುಕೇಶ್, ಕೀರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment