ಆಟೋ ಚಾಲಕನಿಗೆ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ !

0
530

ಶಿವಮೊಗ್ಗ: ನಗರದ ಸವರ್‌ಲೈನ್ ರಸ್ತೆಯಲ್ಲಿರುವ ಬಾರ್‌ವೊಂದರಲ್ಲಿ ಆಟೋ ಚಾಲಕನೊಬ್ಬನಿಗೆ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಪರಾರಿಯಾಗಿರುವ‌ ಘಟನೆ ಇಂದು ವರದಿಯಾಗಿದೆ.

ಬೊಮ್ಮನಕಟ್ಟೆಯ ನಿವಾಸಿ ಆಟೋಚಾಲಕ ಗಾಯಗೊಂಡಿರುವ ಆಟೋಚಾಲಕ ಪ್ರದೀಪ್ (57) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ:

ಸ್ನೇಹಿತ ಪ್ರದೀಪ್ ಎಂಬಾತನೊಂದಿಗೆ ಬಾರ್‌ಗೆ ಹೋಗಿದ್ದಾನೆ.‌ ಪ್ರದೀಪ್ ಹೊರಗಡೆ ಹೋದಾಗ ಯಾವುದೋ ವ್ಯಕ್ತಿಯೊಬ್ಬ ಬಂದು ನಿಮ್ಮ ಸಮಯವಾಗಿದೆ ಹೊರಗಡೆ ನಡೆಯಿರಿ ಎಂದು ಹೇಳಿದ್ದಾನೆ. ನನ್ನ ಸ್ನೇಹಿತ ಬಂದ ಬಳಿಕ ಹೋಗುತ್ತೇವೆ ಎಂದು‌ ವೇಣುಗೋಪಾಲ್ ತಿಳಿಸಿದ್ದಾನೆ. ಇಷ್ಟೇ ಕಾರಣಕ್ಕೆ‌ ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೇಣುಗೋಪಾಲನ ಮೇಲೆ ಹಲ್ಲೆ ಮಾಡಿದ ತಕ್ಷಣ‌ ಸ್ನೇಹಿತ ಕೂಡ ಬಂದಿದ್ದಾನೆ. ಆತನನ್ನು ನೋಡಿ ಹಲ್ಲೆ ಮಾಡಿದ ವ್ಯಕ್ತಿ ಪರಾರಿಯಾಗಿದ್ದಾನೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here