ಶಾಸಕ ಗೋಪಾಲಕೃಷ್ಣ ಬೇಳೂರು ಬಹಿರಂಗ ಕ್ಷಮೆಯಾಚನೆಗೆ ವೀರಶೈವ ಸಮಾಜ ಆಗ್ರಹ

0 11,379

ರಿಪ್ಪನ್‌ಪೇಟೆ: ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರ ವಿರುದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ವೀರಶೈವ ಲಿಂಗಾಯ್ತಿ ಮಹಾಸಭಾ ಹೊಸನಗರ ತಾಲ್ಲೂಕು‌ ಘಟಕದ ಆದ್ಯಕ್ಷ ಎಸ್.ವಿ.ಮಲ್ಲಿಕಾರ್ಜುನ ಹಾಗೂ ಖಜಾಂಚಿ ಜೆ.ಜಿ.ಸದಾನಂದ ಶಾಸಕರು ಹೇಳಿಕೆಯನ್ನು ಹಿಂದಕ್ಕೆ ಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಶನಿವಾರ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.

ವೀರಶೈವ ಲಿಂಗಾಯಿತ ಸಮಾಜ ಭಿಕ್ಷೆ ಬೇಡುವವರಲ್ಲ. ಭಿಕ್ಷೆ ಹಾಕುವವರು ಎಂದು ಹೇಳುವ ಮೂಲಕ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವ ಸಿದ್ದಾಂತದಡಿಯಲ್ಲಿ ರಾಜ್ಯದ ಸರ್ವಾಂಗೀಣ ಆಭಿವೃದ್ದಿಗೆ ಶ್ರಮಿಸಿದವಂತಹ ರಾಷ್ಟ್ರೀಯ ನಾಯಕರಾದ ಬಿ.ಎಸ್.ಯಡಿಯೂರಪ್ಪನವರ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾದಂತಹ ಶಾಸಕ ಗೋಪಾಲಕೃಷ್ಣರವರು ಹಿರಿಯ ನಾಯಕರ ಬಗ್ಗೆ ಮಾನ ಮರ್ಯಾದೆಯ ಬಗ್ಗೆ ಹಗುರುವಾಗಿ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ಹೇಳಿ, ಈ ಕೂಡಲೇ ಶಾಸಕರು ಬಹಿರಗವಾಗಿ ಕ್ಷಮೆ ಕೇಳಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಾಜದವರು ಶಾಸಕರ ವಿರುದ್ದ ಉಗ್ರ ಪ್ರತಿಭಟನೆ ನಡೆಸಬೇಕಾಗುವುದೆಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಗವಟೂರು, ವೀರಶೈವ ಲಿಂಗಾಯತ ಮಹಾಸಭಾ ಹೊಸನಗರ ತಾಲ್ಲೂಕು ಘಟಕದ ನಿರ್ದೇಶಕ ಸೋಮಶೇಖರ (ದೂನರಾಜು), ಜೆ.ಎಂ.ಶಾಂತಕುಮಾರ್, ಬೆನವಳ್ಳಿ ಮಹೇಂದ್ರಗೌಡ, ಬಿ.ಬಿ.ಶಾಂತಪ್ಪಗೌಡ, ತಾಲ್ಲೂಕು ಯುವಘಟಕದ ಅಧ್ಯಕ್ಷ ಹೆಚ್.ಆರ್.ತೀರ್ಥೇಶ್, ಎಸ್.ಪಿ.ಧರ್ಮರಾಜ್‌ ರಿಪ್ಪನ್‌ಪೇಟೆ ಹಾಜರಿದ್ದರು.

Leave A Reply

Your email address will not be published.

error: Content is protected !!