ಕೋಲಾರದಲ್ಲಿ ದತ್ತ ಮಾಲಾಧಾರಿಗಳ ಮೇಲೆ ಹಲ್ಲೆ : ಮುತಾಲಿಕ್ ತೀವ್ರ ಖಂಡನೆ

0
260

ಚಿಕ್ಕಮಗಳೂರು : ಇಂದು ಮುಂಜಾನೆ ಕೋಲಾರದಲ್ಲಿ ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟದ ಘಟನೆಯನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ.

ಇದು ಮುಸ್ಲಿಂ ಗುಂಡಾಗಳು, ಮುಸ್ಲಿಂ ಕಿಡಿಗೇಡಿಗಳಿಂದ ನಡೆದ ಕೃತ್ಯವಾಗಿದ್ದು ಭಜನೆ ಮಾಡಿಕೊಂಡು ಬರುವಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ಇನ್ಮೇಲೆ ದಾದಾಗಿರಿ, ತಾಲಿಬಾನ್ ಕರಣ ಇಲ್ಲಿ ನಡೆಯೋದಿಲ್ಲ. ಹಲ್ಲೆ ಪ್ರವೃತ್ತಿ ನಿಲ್ಲಿಸದಿದ್ರೆ ಒದೀತೀವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇಂತವರನ್ನು ಕೂಡಲೇ ಹದ್ದು ಬಸ್ತಿನಲ್ಲಿಡಬೇಕು ಎಂದು ಒತ್ತಾಯಿಸಿ, ಅಭಿಯಾನಕ್ಕೆ ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆ ಯಾಕೆ ಕೊಡಲಿಲ್ಲ? ಎಂದು ಪ್ರಶ್ನಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಇಲ್ಲದಿದ್ದರೆ ನಾನೇ ಅಲ್ಲಿಗೆ ಹೋಗುವುದಾಗಿ ಹೇಳಿದ್ದಾರೆ.

ಕಾರ್ಯಕರ್ತರ ಪ್ರತಿಭಟನೆ :

ಕೋಲಾರದಲ್ಲಿ ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಪ್ರಕರಣ ಹಲ್ಲೆ ಖಂಡಿಸಿ ಚಿಕ್ಕಮಗಳೂರಿನಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಶಾರದ ಮಠದಲ್ಲಿ ಮುಂಭಾಗ ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ ಆರೋಪಿಗಳನ್ನ ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಎಸ್ಪಿ ಅಕ್ಷಯ್ ಗೆ ಮನವಿ ಸಲ್ಲಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here