‘ಮಾತಾಡ್ ಮಾತಾಡ್ ಕನ್ನಡ’ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಮೊಳಗಿದ ಕನ್ನಡ ಕಹಳೆ

0
148

ಚಿಕ್ಕಮಗಳೂರು: ಕನ್ನಡರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ ‘ಮಾತಾಡ್ ಮಾತಾಡ್ ಕನ್ನಡ’ ‘ಕನ್ನಡಕ್ಕಾಗಿ ನಾವು ಎಂಬ ಕಾರ್ಯಕ್ರಮವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಮೂಹ ಗೀತಗಾಯನಲ್ಲಿ ಕನ್ನಡದ ನಾಡಿನ ಕಹಳೆ ಹಾಡಿನ ಮೂಲಕ ಮೊಳಗಿತು.

ಕನ್ನಡದ ಪ್ರತಿಷ್ಠತೆಯನ್ನು ಸಾರುವತಂಹ ಕುವೆಂಪುರವರ ಬಾರೆದ ಬಾರಿಸು ಕನ್ನಡ ಡಿಂಡಿಮವ, ಡಾ ಕೆ,ಎಸ್, ನಿಸಾರ್ ಅಹಮ್ಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖರವರ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು. ಹಾಡುಗಳನ್ನು ಹಾಡುವ ಮೂಲಕ ’ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಯಶಸ್ವಿಗೊಳಿಸಿದರು.

ನಂತರ ಕನ್ನಡ ಸಂಕಲ್ಪದ ಪ್ರತಿಜ್ಞೆಯನ್ನು ಶಿಕ್ಷಕ ಸುರೇಂದ್ರ ನಾಯ್ಕ್ ಬೋಧಿಸಿದ್ದು, ಗೀತಗಾಯನವನ್ನು ನಾದ ಚೈತನ್ಯ ತಂಡದ ಶ್ರೀ ಮತಿ ರೇಖಾ ಪ್ರೇಮ್ ಕುಮಾರ್ ನಡೆಸಿ ಕೊಟ್ಟರೆ, ಪೊಲೀಸ್ ಬ್ಯಾಂಡ್ ವಾದನ ಹಾಗೂ ಪೊಲೀಸ್ ಶ್ವಾನದಳ ವಿಶೇಷ ಪ್ರದರ್ಶನವೂ ಸಹ ಜರುಗಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ಬಿ.ಆರ್ ರೂಪ, ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್ ಅಕ್ಷಯ್, ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಶಿಕ್ಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here