ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಾಲ್ವರ ಪೈಪೋಟಿ, ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ ?

0 2,166

ರಿಪ್ಪನ್‌ಪೇಟೆ: ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಯಾದ ಬೆನ್ನಲ್ಲೇ ಜಿಲ್ಲಾ, ತಾಲ್ಲೂಕು ಬಿಜೆಪಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದ್ದು ಈಗಾಗಲೇ ಹೊಸನಗರ ತಾಲ್ಲೂಕು ಅಧ್ಯಕ್ಷರ ಗದ್ದುಗೆಗೆ ನಾಲ್ವರ ಹೆಸರು ಮುನ್ನಲೆಗೆ ಬಂದಿದೆ.

ಈಗಾಗಲೇ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಶಾಸಕ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಜೊತೆ ಒಡನಾಟ ಹೊಂದಿರುವ ಆಲವಳ್ಳಿ ವೀರೇಶ್ ಮತ್ತು ಪಕ್ಷದ ಸಕ್ರಿಯಾರಾಗಿರುವ ಎಂ.ಎನ್.ಸುಧಾಕರ ಮತ್ತು ಹುಂಚ ಹೋಬಳಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಎಲೆಮರೆಯ ಕಾಯಿಯಂತೆ ಕಾರ್ಯನಿರ್ವಹಿಸಿ ತಾಲ್ಲೂಕು ಬಿಜೆಪಿಯಲ್ಲಿ ಪ್ರಮುಖ ಹುದ್ದೆಯಲ್ಲಿರುವ ಕಲ್ಲೂರು ನಾಗೇಂದ್ರ ಇದರೊಂದಿಗೆ ಕಸಬಾ ಹೋಬಳಿ ವ್ಯಾಪ್ತಿಯ ಯುವಕ ಚಿಕ್ಕಮಣತಿ ಶಿವಾನಂದ ಹಾಗೂ ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಸ್ವಾಮಿ ಸೇರಿದಂತೆ ಇಂದು ಮತ್ತೊಂದು ಹೆಸರು ಸಹ ಕೇಳಿ ಬರಲಾರಂಭಿಸಿದ್ದು ಈಗಾಗಲೇ ಕೆರೆಹಳ್ಳಿ, ಹುಂಚ ಬಿಜೆಪಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ್ ಸಹ ನಾನು ಆಕಾಂಕ್ಷಿಯೆನ್ನುವುದರೊಂದಿಗೆ ಒಟ್ಟಾರೆಯಾಗಿ ಅಧ್ಯಕ್ಷ ಗಾದಿಗೆ ಹನುಮಂತನ ಬಾಲದಂತೆ ಹೆಸರುಗಳು ಬೆಳೆದಿದೆ.

ಒಂದು ಕಡೆಯಲ್ಲಿ ವೀರೇಶ್ ಆಲವಳ್ಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರೊಂದಿಗೆ ಮತ್ತು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರ ಜೊತೆ ಒಡನಾಟದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಅದೃಷ್ಟ ಇವರಿಗೆ ದೊರೆಯುವುದೋ ಎಂಬ ಸ್ಪಷ್ಟ ಲಕ್ಷಣ ಗೋಚರಿಸಲಾರಂಭಿಸಿದರೆ, ಅವರಂತೆ ಹರತಾಳು ಹಾಲಪ್ಪ ಮತ್ತು ಆರಗ ಜ್ಞಾನೇಂದ್ರರ ಕೃಫೆ ಯಾರ ಮೇಲಿದೆಯೋ ಅವರಿಗೆ ಅದೃಷ್ಟ ಕುಲಾಯಿಸುತ್ತದೆಂದು ಹಲವು ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಒಟ್ಟಾರೆಯಾಗಿ ಸದಾ ಸುದ್ದಿಯಲ್ಲಿರುವ ತಾಲ್ಲೂಕು ಬಿಜೆಪಿ ಅಧ್ಯಕ್ಷ ಗದ್ದುಗೆ ಈ ಬಾರಿಯಲ್ಲಿ ವೀರೇಶ್ ಆಲವಳ್ಳಿಗೋ ಆಥವಾ ಇನ್ನಾರಿಗೋ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಎರಡ್ಮೂರು ದಿನಗಳಿಂದ ತಾಲ್ಲೂಕು ಬಿಜೆಪಿ ಅಧ್ಯಕ್ಷರಾಯ್ಕೆಗೆ ಸಾಕಷ್ಟು ಹೆಸರುಗಳನ್ನು ಹರಿದಾಡುತ್ತಿದ್ದು ಪಕ್ಷದ ಮುಖಂಡರು ಯಾರಿಗೆ ಮನ್ನಣೆ ನೀಡುವರು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.

Leave A Reply

Your email address will not be published.

error: Content is protected !!