ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಿ ; ನಾಗರಾಜ್

0
302

ಶಿವಮೊಗ್ಗ : ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳಾಗಿ ಎಳೆಯ ವಯಸ್ಸಿನಲ್ಲೇ ರೂಪಿಸಿ ವೈಜ್ಞಾನಿಕ ವಿಧಾನದ ಪರಿಚಯ ಮಾಡಿಸುವ ಕಾರ್ಯವಾಗಬೇಕು ಎಂದು ಡಯಟ್ ಶಿಕ್ಷಣ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ನಾಗರಾಜ್ ಹೇಳಿದರು.

ಡಯಟ್ ಕಾಲೇಜು ಆವಣರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾಮಟ್ಟದ ಯುವ ವಿಜ್ಞಾನಿ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಮೂಲ ವಿಜ್ಞಾನದ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನಾ ಕೌಶಲ್ಯಗಳನ್ನು ಹೆಚ್ಚಿಸಬೇಕು. ಇಂದು ವಿಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದೆ, ಮಕ್ಕಳಿಗೆ ವಿಜ್ಞಾನದ ಆಸಕ್ತಿ ಮೂಡಿಸುವುದರ ಜೊತೆಗೆ ಸಂಶೋಧನಾತ್ಮಕ ಮನೋಭಾವನೆಯನ್ನು ಬೆಳಸಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ರಾ.ವಿ.ಪ ರಾಜ್ಯಕಾರ್ಯಕಾರಿ ಸಮಿತಿಯ ಸದಸ್ಯರಾದ ಫ್ರಾನ್ಸಿಸ್ ಜಿ ಬೆಂಜಮಿನ್ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರಿಯಾತ್ಮಕ ಕೌಶಲ್ಯವನ್ನು ವೃಧ್ದಿಸಿಕೊಳ್ಳಲು, ಹೊಸ ಹೊಸ ವೈಜ್ಞಾನಿಕ ಆಲೋಚನೆಗಳನ್ನು ಆವಿಷ್ಕರಿಸಲು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಾ ನಿಮ್ಮೊಂದಿಗೆ ಇದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮುಖಾಂತರ ತಮ್ಮ ವೈಜ್ಞಾನಿಕ ಮನೋಭಾವನೆಗಳನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಹೊಸ ಹೊಸ ವಿಜ್ಞಾನಿಗಳಾಗಿ ದೇಶಕ್ಕೆ ಪಾದಾರ್ಪಣೆ ಮಾಡಿ ಒಳ್ಳೆಯ ಕೊಡುಗೆಗಳನ್ನು ನೀಡಬೇಕು ಎಂದು ನುಡಿದರು.

ವಿಜ್ಞಾನ ಪರಿಷತ್ತಿನ ಕ.ರಾ.ವಿ.ಪದ ಜಿಲ್ಲಾಧ್ಯಕ್ಷರಾದ ಡಾ. ಶ್ರೀಪತಿ ಮಾತನಾಡುತ್ತಾ, ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಮಾಜಕ್ಕೆ ಅನುಕೂಲವಾಗುವಂತ ಉತ್ತಮ ಸಂದೇಶಗಳನ್ನು ನೀಡುವಂತಹ ಮಾಡೆಲ್‌ಗಳನ್ನು ತಯಾರು ಮಾಡಿ ಪ್ರಶಸ್ತಿ ಗಳಿಸಿ ರಾಜ್ಯ ಹಾಗೂ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಯ ಪ್ರತಿಭೆಗಳನ್ನು ಹೆಚ್ಚಿಸಬೇಕು ಎನ್ನುವುದರೊಂದಿಗೆ ಅನೇಕ ವಿಜ್ಞಾನದ ಮಾಹಿತಿಗಳನ್ನು ತಿಳಿಸಿದರು.

ಸಮಾರಂಭದಲ್ಲಿ ಉಪಾಧ್ಯಕ್ಷರಾದ ಡಾ. ಪರಿಸರ ನಾಗರಾಜ್, ಜೆ.ಎನ್.ಎನ್.ಸಿ. ಪ್ರಾಧ್ಯಾಪಕರಾದ ಹೆಚ್.ಬಿ.ಸುರೇಶ್, ಜಿಲ್ಲಾ ಸಂಯೋಜಕರಾದ ಶ್ರೀಮತಿ ಗಾಯಿತ್ರಿ ಪಟೇಲ್, ಕಾರ್ಯದರ್ಶಿ ಲೋಕೇಶ್ವರಪ್ಪ ಎಸ್.ಎನ್., ಕ.ರಾ.ವಿ.ಪ. ಆಜೀವ ಸದಸ್ಯರಾದ ಡಾ| ರಶ್ಮಿ ಫ್ರಾನ್ಸಿಸ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘದ ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಶಂಕರ್‌ಗೌಡ ಪಟೇಲ್, ವೀಣಾ ಹಾಗೂ ಕ.ರಾ.ಪಿ.ಪ ದ ಸದಸ್ಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ 9 ರಿಂದ 12ನೇ ತರಗತಿಯ ಜಿಲ್ಲೆಯ 28 ವಿದ್ಯಾರ್ಥಿನಿಯರು, ಯುವ ವಿಜ್ಞಾನಿಗಳು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here