ಹೊಸನಗರ: ಸಹಕಾರಿ ಸಂಸ್ಥೆಗಳಿಗೆ ರೈತರು ಬೆನ್ನೆಲುಬಾಗಿ ನಿಂತರೆ ಮಾತ್ರ ಸಹಕಾರಿ ಬ್ಯಾಂಕ್ಗಳು ಲಾಭಾಂಶ ಗಳಿಸಲು ಸಾಧ್ಯ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಎಂ.ವಿ ಜಯರಾಮ್ರವರು ಹೇಳಿದರು.
ಹೊಸನಗರ ಪಿಎಲ್ಡಿ ಬ್ಯಾಂಕ್ ಆವರಣದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ನಾವು ಈಗಾಗಲೇ ಮಾರ್ಚ್31ರ ಒಳಗೆ ನಮ್ಮ ಬ್ಯಾಂಕ್ನಿಂದ ಸಾಲ ಪಡೆದವರು ಮರುಪಾವತಿಗಾಗಿ ತಿಳುವಳಿಕೆ ನೋಟಿಸು ನೀಡಲಾಗಿದೆ ಆದರೆ ಕಾರಣಾಂತರದಿಂದ ನೋಟಿಸ್ ಸಾಲಗಾರರ ಮನೆ ತಲುಪಿಲ್ಲ. ಸುಮಾರು ಒಂದು ತಿಂಗಳಿಂದ ನಮ್ಮ ಬ್ಯಾಂಕ್ ಸಿಬ್ಬಂದಿಗಳು ಸಾಲಗಾರರ ಮನೆಗಳಿಗೆ ಭೇಟಿ ನೀಡಿ ಸಾಲ ಮರುಪಾವತಿಗಾಗಿ ಒತ್ತಾಯಿಸುತ್ತಿದ್ದೇವೆ. ಕೆಲ ರೈತರು ಸ್ಪಂದಿಸುತ್ತಿದ್ದಾರೆ.
ಹಿಂದಿನ ಸಾಲಿನಲ್ಲಿ ಸಾಲ ಪಡೆದವರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದು ಸಾಲ ವಸೂಲಾತಿಯಲ್ಲಿ ಗಣನೀಯ ಪ್ರಮಾಣ ಹೆಚ್ಚಿಸಲು ಸಾಧ್ಯವಾಗಿಲ್ಲ. 2020-21ನೇ ಸಾಲೀನಲ್ಲಿ ಒಟ್ಟು 1968 ಸಾಲಗಾರರಿದ್ದು ಇದರಲ್ಲಿ 900ರೈತರು ಸುಸ್ತಿದಾರರಾಗಿದ್ದು ಶೇ.65ರಷ್ಟು ಹೊರಬಾಕಿ ಸುಸ್ತಿಯಾಗಿರುತ್ತದೆ. ರಾಜ್ಯ ಸರ್ಕಾರ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಯೋಜನೆಯಲ್ಲಿ ಈ ಸಂಖ್ಯೆ 2021ಕ್ಕೆ 1600 ರೈತರಲ್ಲಿ 547 ರೈತರು ಸುಸ್ತಿದಾರರಾಗಿದ್ದು ಶೇ. 57% ಹೊರ ಬಾಕಿ ಸುಸ್ತಿದಾರರಾಗಿರುತ್ತಾರೆ ಇದರ ಪ್ರಮಾಣ ಶೇ. 25%ಗೆ ಇಳಿಸುವ ಗುರಿ ಬ್ಯಾಂಕ್ ಹೊಂದಿದೆ ಎಂದರು.
ಇಂದಿನ ವರ್ಷ 2021-22ರಲ್ಲಿ ಸರ್ಕಾರ ಬಡ್ಡಿ ಮನ್ನಾ ಯೋಜನೆ ಇಲ್ಲದೇ ಇರುವುದರಿಂದ ರೈತರು ಮಾರ್ಚ್ 31ರ ಒಳಗೆ ತಮ್ಮ ಸುಸ್ತಿ ಸಾಲವನ್ನು ಮರು ಪಾವತಿಸಿ ನಂತರ ಶೇ. 3%ರಂತೆ ಹೊಸ ಸಾಲ ಪಡೆಯಬೇಕೆಂದು ಇದರ ಉಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳ ಬೇಕೆಂದು ಹೇಳಿದರು.
ನಬಾರ್ಡ್ ಸಂಸ್ಥೆ 70ರಷ್ಟು ವಸೂಲಾತಿ ಮಾಡಿದ್ದಲ್ಲಿ ಅನಿರ್ದಿಷ್ಟ ಬ್ಯಾಂಕ್ ಎಂದು ಘೋಷಿಸಲಾಗಿದ್ದು ರೈತರು ತಕ್ಷಣ ಸುಸ್ತಿ ಸಾಲವನ್ನು ಮರು ಪಾವತಿಸಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷರಾದ ಈಶ್ವರಪ್ಪ, ಸದಸ್ಯರದ ಜಬಗೋಡು ಹಾಲಪ್ಪ ಗೌಡ, ಕಾರ್ತಿಕ್ ಬ್ಯಾಂಕ್ ವ್ಯವಸ್ಥಾಪಕರಾದ ಸುನೀಲ್ ಹಾಗೂ ಬ್ಯಾಂಕಿನ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
Related