ಸೇಫ್ ಚಿಕ್ಕಮಗಳೂರು ಯೋಜನೆಯ ಅಂಗವಾಗಿ ನಡೆದ ಸಭೆ

0
172

ಚಿಕ್ಕಮಗಳೂರು: ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕುಂದಾಪುರದ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಹಯೋಗದೊಂದಿಗೆ ಸೇಫ್ ಚಿಕ್ಕಮಗಳೂರು ಪ್ರಾಜೆಕ್ಟ್ ಪ್ರಾರಂಭಿಸಿದೆ. ಈ ಯೋಜನೆಯ ಕುರಿತು ಚಿಕ್ಕಮಗಳೂರು & ಮೂಡಿಗೆರೆಯಲ್ಲಿ ಸಭೆಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಡೆಸಲಾಯಿತು.

ಸಭೆಯಲ್ಲಿ ಬ್ಯಾಂಕ್, ಹಣಕಾಸು ಸಂಸ್ಥೆ & ಧಾರ್ಮಿಕ ಸ್ಥಳಗಳ ಪದಾಧಿಕಾರಿಗಳೊಂದಿಗೆ ಸಂವಹನ ನಡೆಸಿ, ಈ ಯೋಜನೆಗೆ ಸೇರುವ ಸಂಸ್ಥೆ ಹಾಗೂ ಉದ್ದಿಮೆಗಳ ಸಿಸಿಟಿವಿ ಗಳನ್ನು ರಾತ್ರಿ ಕಾಲದಲ್ಲಿ ಭದ್ರತೆಯ ದೃಷ್ಠಿಯಿಂದ ಸೈನ್ ಇನ್ ಸೆಕ್ಯೂರಿಟಿ ವತಿಯಿಂದ ವೀಕ್ಷಿಸಿ ಯಾವುದೇ ಅಪರಾಧ , ಅವಘಡ ಬಗ್ಗೆ ಮಾಹಿತಿ ನೀಡಿ ಅಪರಾಧ / ಅವಘಡ ತಡೆಗಟ್ಟಲಾಗುತ್ತದೆ.

ಈ ಯೋಜನೆಯಲ್ಲಿ ಬ್ಯಾಂಕ್, ಹಣಕಾಸು ಸಂಸ್ಥೆ, ಆಭರಣ ದ ಅಂಗಡಿ, ಧಾರ್ಮಿಕ ಸ್ಥಳಗಳು & ಇನ್ನಿತರೇ ಉದ್ದಿಮೆಗಳು ಸೇರ್ಪಡೆಯಾಗಬಹುದು. ಭದ್ರತಾ ಮತ್ತು ಸುರಕ್ಷತೆಯ ದೃಷ್ಠಿಯಿಂದ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಯಿತು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here