ಹೊಸನಗರ : ತಾಲೂಕು ತ್ರಿಣಿವೆ ಗ್ರಾಮ ಪಂಚಾಯಿತಿಯ ನಾಗರಕೊಡಿಗೆಯ ಕೂಲಿ ಕಾರ್ಮಿಕ ಗೋಪಾಲ್ (40) ಎಂಬಾತನ ಬೆಳಗ್ಗೆ 11 ಗಂಟೆ ಸುಮಾರಿಗೆ ತನ್ನ ಮಾವನ ಮನೆಯ ಪಕಾಸಿ ತೊಲೆಗೆ ವೇಲ್ ಮಾದರಿಯ ಬಟ್ಟೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿದೆ.
ಮೃತ ಗೋಪಾಲ್ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಗಾರ್ಡರಗದ್ದೆ ನಿವಾಸಿಯಾಗಿದ್ದು ನಾಗರಕೊಡುಗೆ ಚೆನ್ನಪ್ಪ ಎಂಬುವವರ ಮಗಳಾದ ಸುಮಿತ್ರಾ ಎಂಬುವವರ ಜೊತೆ ಮದುವೆಯಾಗಿ ಮಾವನ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದ ಎನ್ನಲಾಗಿದೆ.
ಮೃತನಿಗೆ ಪತ್ನಿ, ಓರ್ವ ಪುತ್ರ, ಓರ್ವಳು ಪುತ್ರಿಯಿದ್ದು ಈತ ಮದ್ಯವ್ಯಸನಿಯಾಗಿದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.