ಹೊಸನಗರ ಬಸ್‌ ಸ್ಟ್ಯಾಂಡ್ ಹಾಗೂ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪೋಲಿಯೋ ಹನಿ ಕಾರ್ಯಕ್ರಮಕ್ಕೆ ಚಾಲನೆ

0
459

ಹೊಸನಗರ: ಕೇಂದ್ರ-ರಾಜ್ಯ ಸರ್ಕಾರದ ಮಹಾತ್ಮಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಮುಂದಿನ ವರ್ಷದಲ್ಲಿ ಪೋಲಿಯೋ ರೋಗದಿಂದ ಮುಕ್ತಿಗೊಳಿಸುವ ಉದ್ದೇಶದಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹೊಸನಗರ ತಾಲ್ಲೂಕಿನದ್ಯಾಂತ ನಡೆಯುತ್ತಿದ್ದು ಅದರಂತೆ ಹೊಸನಗರ ಬಸ್‌ಸ್ಟ್ಯಾಂಡ್ ಆವರಣದಲ್ಲಿ ಆರೋಗ್ಯ ಇಲಾಖೆ ಮತ್ತು ಜೆಸಿಐ ಕೊಡಚಾದ್ರಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಲಿಯೋ ಹನಿ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಶಾಂತರಾಜ್ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೀವನದ 2 ಹನಿಗಳಿಂದ ಪೋಲಿಯೋ ವಿರುದ್ಧ ಸಾಧಿಸುವ ವಿಜಯವನ್ನು ಮುಂದುವರೆಸೋಣ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here