ರಿಪ್ಪನ್ಪೇಟೆ ಸುತ್ತಮುತ್ತಲಿನ ಈ ಗ್ರಾ.ಪಂ ವ್ಯಾಪ್ತಿಗಳಲ್ಲಿ ಜೂ.08 ಮತ್ತು 09 ರಂದು ಕರೆಂಟ್ ಇರಲ್ಲ !
ರಿಪ್ಪನ್ಪೇಟೆ : 110/11ಕೆ.ವಿ ರಿಪ್ಪನ್ಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜೂ. 08 ಮತ್ತು 09 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ರಿಪ್ಪನ್ಪೇಟೆ ಮೆಸ್ಕಾಂ ಶಾಖೆಯ ಸಹಾಯಕ ಇಂಜಿನಿಯರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜೂ. 08 ಮತ್ತು 09 ರಂದು ಬೃಹತ್ ಕಾಮಗಾರಿ ವಿಭಾಗ ಕವಿಪ್ರನಿನಿ ಶಿವಮೊಗ್ಗ ಇವರು 110 ಕೆ.ವಿ ಎಸ್.ಎಸ್-2 ಮಾರ್ಗವನ್ನು ಕುಂಸಿ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ಕಾಮಗಾರಿ ನಡೆಸಲು 110 ಕೆ.ಬಿ ಎಸ್.ಎಸ್-1 ಮತ್ತು 110 ಕೆ.ಬಿ ಎಸ್.ಎಸ್-2 ಮಾರ್ಗಮುಕ್ತತೆ ಪಡೆಯುತ್ತಾರೆ. ಇದರಿಂದ ಈ ಎರಡು ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗಿನ ಸಮಯದಲ್ಲಿ ತುರ್ತು 5 ಗಂಟೆಗಳ ಕಾಲ ವಿದ್ಯುತ್ ಅಡಚಣೆಯಾಗುವುದು.
ಇದರಿಂದಾಗಿ 110/11 ರಿಪ್ಪನ್ಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ರಿಪ್ಪನ್ಪೇಟೆ ಶಾಖಾ ವ್ಯಾಪ್ತಿಯ ರಿಪ್ಪನ್ಪೇಟೆ, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಬೆಳ್ಳೂರು, ಅರಸಾಳು, ಕೋಡೂರು, ಚಿಕ್ಕಜೇನಿ, ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.