ಗರ್ತಿಕೆರೆ ; ಅಮೃತ ಕಾಲೇಜಿನಲ್ಲಿ ನಾಳೆ, ನಾಡಿದ್ದು ‘ವಿಜ್ಞಾನ ಹಬ್ಬ’

0 197

ಶಿವಮೊಗ್ಗ : ಹೊಸನಗರ ತಾಲೂಕು ಗರ್ತಿಕೆರೆಯ ಪ್ರೊ. ಹೆಚ್.ಎಸ್.ಗಣೇಶ್ ಮೂರ್ತಿ ಶಿಕ್ಷಣ ಪ್ರತಿಷ್ಠಾನ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಅಮೃತದ ಸಹಯೋಗ ಹಾಗೂ ಶಿಕ್ಷಣ ಇಲಾಖೆ ಸಹಕಾರದಲ್ಲಿ ನ.10 ಮತ್ತು 11 ರಂದು ಎರಡು ದಿನಗಳ ಕಾಲ ಜಿ.ಎಂ. ವಿಜ್ಞಾನ ಸಂಭ್ರಮ ಕಾರ್ಯ‌ಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಮೃತ ಕಾಲೇಜಿನಲ್ಲಿ‌ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ‌ ನಡೆಯುವ ಈ ವಿಜ್ಞಾನ ಹಬ್ಬ ಮಲೆನಾಡಿನಲ್ಲಿ ಇದೇ ಮೊದಲ ಬಾರಿಗೆ ನಡೆಯುವ ವಿನೂತನ ವಿಜ್ಞಾನ ಹಬ್ಬವಾಗಿದೆ. ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಬೆಂಗಳೂರಿನ ವಿಜ್ಞಾನ‌ ಮಂದಿರದ ನಿವೃತ್ತ ಡೀನ್ ಪ್ರೊ.ಎಂ.ಆರ್.ಎನ್.ಮೂರ್ತಿ ವಿಜ್ಞಾನ ಸಂಭ್ರಮಕ್ಕೆ ಚಾಲನೆ ನೀಡುವರು. ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ.ನಾಗೇಂದ್ರ, ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ.ಹೆಚ್.ಜಿ. ರವಿಶಂಕರ್ ಉಪಸ್ಥಿತರಿರುವರು.

ಧನುಷ್ ಕುಮಾರ್ ಅವರಿಂದ ಸಹ್ಯಾದ್ರಿ ಸಂವಾದ, ಬೆಳ್ಳೂರು ನಾಗರಾಜ್ ಅವರಿಂದ ಹಾವು-ಮಾನವ ಸಹಬಾಳ್ವೆ, ಸುಬ್ಬಯ್ಯ ಮೆಡಿಕಲ್ ಕಾಲೇಜಿನಿಂದ ನಮ್ಮ ದೇಹ-ನಮ್ಮ ಆರೋಗ್ಯ ಪ್ರಾತ್ಯಕ್ಷಿಕೆ ಮತ್ತು ಅರಿವು ಕಾರ್ಯಕ್ರಮಗಳಿವೆ. ವಿದ್ಯಾರ್ಥಿ ವಿಜ್ಞಾನ ಪ್ರತಿನಿಧಿಗಳಿಂದ ವಿಜ್ಞಾನ ಸಮಾವೇಶ, ಮಣ್ಣಿನೊಂದಿಗೆ ಮಾತುಕತೆಯನ್ನು ಸಾಯಲ್ ಸಂಸ್ಥೆಯ ಶ್ರೀನಿವಾಸ್, ಬಸವರಾಜ್ ನಡೆಸಿಕೊಡುವರು. ಜೀವಸಂಕುಲಗಳೊಂದಿಗೆ ನಾವು ಗೊಷ್ಠಿಯನ್ನು ಕೆ.ಮನು, ಖಗೋಳಯಾನ ಗೋಷ್ಠಿಯಲ್ಲಿ ಎಸ್.ಎಸ್.ಟಿ.ಸ್ವಾಮಿ ನಡೆಸಿ ಕೊಡುವರು. ಬಿ.ಎಸ್.ಕೃಷ್ಣಮೂರ್ತಿ ಗಣಿತ-ಕುಣಿತ ಗೋಷ್ಠಿ ನಡೆಸಿ ಕೊಡುವರು.

ವಿಜ್ಞಾನಿಗಳಾದ ಡಾ.ಟಿ.ಎಸ್.ಚನ್ನೇಶ್, ಡಾ.ಪ್ರಸನ್ನ ಕೆ ಸಂತೆಕಡೂರು ಅವರೊಂದಿಗೆ ಮುಕ್ತ ಮಾತುಕತೆ ಕಾರ್ಯಕ್ರಮವಿದೆ. ಎರಡು ದಿನಗಳ ಈ ವಿನೂತನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರತಿಷ್ಠಾನದ ಎಚ್.ಎಸ್.ಅನಂತಮೂರ್ತಿ ಹಾಗೂ ಸಿರಿಗನ್ನಡ ಪುಸ್ತಕ ಮನೆಯ ಎಸ್.ಸುಂದರ ಮನವಿ ಮಾಡಿದ್ದಾರೆ.

Leave A Reply

Your email address will not be published.

error: Content is protected !!