ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ಚಂದ್ರಗುತ್ತಿಗೆ ತನ್ನದೇ ಆದ ಕೊಡುಗೆ ಇದೆ ; ಶ್ರೀಧರ್ ಹುಲ್ತಿಕೊಪ್ಪ

0 214

ಸೊರಬ : ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ಚಂದ್ರಗುತ್ತಿಗೆ ತನ್ನದೇ ಆದ ಕೊಡುಗೆ ಇದೆ ಎಂದು ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣ ಸಮಿತಿ ಅಧ್ಯಕ್ಷ ಆರ್ ಶ್ರೀಧರ್ ಹುಲ್ತಿಕೊಪ್ಪ ಹೇಳಿದರು.

ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫ್ರೆಂಡ್ಸ್ ಸರ್ಕಲ್ ಚಂದ್ರಗುತ್ತಿ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಅಭಿಮಾನವಿಟ್ಟುಕೊಳ್ಳಬೇಕು, ಇಂತಹ ಕ್ರೀಡೆಗಳು ಯುವಕರಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಯಾವುದೇ ಜಾತಿ ಭೇದವಿಲ್ಲದೆ ಒಗ್ಗಟ್ಟಿನಿಂದ ಇಂತಹ ಕಾರ್ಯಕ್ರಮಗಳನ್ನು ನಡೆಸಿದಾಗ ಮಾತ್ರ ಗ್ರಾಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂದರು‌

ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ಸಮಾಜದ ಮಹಿಳೆಯರು ಸಹ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಂಕಣ ಉದ್ಘಾಟನೆಯನ್ನು ವೇದಿಕೆಯಲ್ಲಿ ಇರುವಂತಹ ಪ್ರಮುಖರು ನೆರವೇರಿಸಿದರು.

ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್, ಸದಸ್ಯ ಎಂ.ಪಿ ರತ್ನಾಕರ್, ತಾಪಂ ಮಾಜಿ ಸದಸ್ಯ ಎನ್.ಜಿ ನಾಗರಾಜ್, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ.ಮಾರ್ಯಪ್ಪ, ವಕೀಲ ಪಿ. ಸುಧಾಕರ್ ನಾಯ್ಕ್, ಗ್ರಾಪಂ ನೌಕರ ಸಂತೋಷ್, ಪ್ರಮುಖರಾದ ಅಜೀಜ್ ಅಹ್ಮದ್, ಜಹೀರ್ ಖಾನ್, ಶರದ್ ನಾಯಕ್, ಇರ್ಫಾನ್, ಪ್ರಕಾಶ್ ಮಿರ್ಜಿ, ಪರಮೇಶ್ ಸೇರಿದಂತೆ ಗ್ರಾಮದ ಮುಖಂಡರು ಫ್ರೆಂಡ್ಸ್ ಸರ್ಕಲ್ ಬಳಗದವರು ಉಪಸ್ಥಿತರಿದ್ದರು.

ವಾಲಿಬಾಲ್ ಪಂದ್ಯಾವಳಿಗೆ ಫ್ರೆಂಡ್ಸ್ ಸರ್ಕಲ್ ಬಳಗದವರು ಸೇರಿದಂತೆ ಗ್ರಾಮದ ಯುವಕರು ಸಹಕರಿಸಿದರು.

Leave A Reply

Your email address will not be published.

error: Content is protected !!