ಸೋರುತಿಹುದು ಆರೋಗ್ಯ ಕೇಂದ್ರದ ಮೇಲ್ಛಾವಣಿ ; ಜೀವಭಯದಲ್ಲಿ ವೈದ್ಯಾಧಿಕಾರಿಗಳು !

0 64

ರಿಪ್ಪನ್‌ಪೇಟೆ: ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯಾಧಿಕಾರಿಗಳು ಕುಳಿತು ರೋಗಿಗಳನ್ನು ತಪಾಸಣೆ ಮಾಡುವ ಕೊಠಡಿಯ ಮೇಲ್ಛಾವಣಿಯ ಆರ್‌ಸಿಸಿ ಕಟ್ಟಡದ ಕಾಂಕ್ರೀಟ್ ಉದುರಿ ವೈದ್ಯರ ಅಥವಾ ರೋಗಿಗಳ ಮೇಲೆ ಬೀಳುವಂತಾಗಿದ್ದರೂ ಕೂಡಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣಿದ್ದು ಕುರುಡರತಾಂಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆಗಾಲ ಬಂತು ಎಂದರೆ ಸಾಕು ಅನಾರೋಗ್ಯ ಪೀಡಿತರು ಆಸ್ಪತ್ರೆಯ ಸಿಬ್ಬಂದಿವರ್ಗ ಹೆಲ್ಮೆಟ್ ಹಾಕಿಕೊಂಡೆ ಆಸ್ಪತ್ರೆಯ ಒಳಗೆ ತೆರಳಬೇಕು ಎಂದು ಈ ಹಿಂದೆ ಕ್ಷೇತ್ರದ ಹಾಲಿ ಶಾಸಕ ಪ್ರತಿಭಟನೆಯನ್ನು ಮಾಡಿದ್ದು ಆಗ ಮಾಜಿ ಶಾಸಕ ಹರತಾಳು ಹಾಲಪ್ಪನವರು ಸರ್ಕಾರದಿಂದ ಅಲ್ಪ ಅನುದಾನವನ್ನು ಬಿಡುಗಡೆಗೊಳಿಸಿ ತಾತ್ಕಾಲಿಕವಾಗಿ ದುರಸ್ಥಿಗೊಳಿಸಿದ್ದಾರೆನ್ನಲಾಗಿದ್ದು ಈ ಭಾರಿ ಕಳೆದ ಒಂದು ವಾರದಿಂದ ಆರಂಭಗೊಂಡಿರುವ ಭಾರಿ ಮಳೆಯಿಂದಾಗಿ ವೈದ್ಯಾಧಿಕಾರಿಗಳು ಕುಳಿತುಕೊಳ್ಳುವ ಕೊಠಡಿ ಸೇರಿದಂತೆ ಔಷಧಿ ವಿತರಣೆ ಮತ್ತು ಹೆರಿಗೆ ವಾರ್ಡ್ ಮತ್ತು ಇನ್ನಿತರ ವಾರ್ಡ್ ಕೊಠಡಿಗಳಲ್ಲಿ ಆರ್‌ಸಿಸಿ ಕಟ್ಟಡದಲ್ಲಿ ಮಳೆ ನಿಂತರು ಕೂಡಾ ನೀರು ಸೋರುವುದು ಮಾತ್ರ ನಿಂತಿಲ್ಲ.

ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ರಿಪ್ಪನ್‌ಪೇಟೆ, ಕೆಂಚನಾಲ, ಬಾಳೂರು, ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಚಿಕ್ಕಜೇನಿ ಸುತ್ತಮುತ್ತಲಿನಿಂದ ಸುಮಾರು ನಿತ್ಯ ಸಾವಿರಾರು ಜನರು ಆರೋಗ್ಯ ತಪಾಸಣೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೋಗುತ್ತಾರೆ.

ಇನ್ನೂ ಶಿವಮೊಗ್ಗ-ಹೊಸನಗರ-ಸಾಗರ-ತೀರ್ಥಹಳ್ಳಿ ಸಂಪರ್ಕದ ಪ್ರಮುಖ ಕೇಂದ್ರ ಸ್ಥಾನವಾಗಿರುವ ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕ ಅಪಘಾತಗಳು ಇನ್ನಿತರ ಅವಘಡಗಳು ಸಂಭವಿಸಿದರೆ ತುರ್ತು ಚಿಕಿತ್ಸೆ ನೀಡುವ ಕೇಂದ್ರವಾಗಿದ್ದರೂ ಕೂಡಾ ಸಕಾಲದಲ್ಲಿ ಈ ಆಸ್ಪತ್ರೆಯಲ್ಲಿ ವೈದ್ಯರು ಇರುವುದಿಲ್ಲ ಒಟ್ಟಾರೆಯಲ್ಲಿ ಈ ಸರ್ಕಾರಿ ಆಸ್ಪತ್ರೆ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳ ಸರಮಾಲೆಯಲ್ಲಿ ಪ್ರಚಾರದ ವಸ್ತುವಾಗಿ ಮಾರ್ಪಟಿರುವುದು ಜನರಲ್ಲಿ ತಾಸ್ತರದ ವಿಷಯವಾಗಿ ರೂಪುಗೊಂಡಿದೆ.

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಮರಣೋತ್ತರ ಪರೀಕ್ಷೆ ಮಾಡಿರುವುದು ರಾಜ್ಯವ್ಯಾಪ್ತಿ ಸುದ್ದಿಯಾಗಿದ್ದರೆ ಇನ್ನೂ ಆಸ್ಪತ್ರೆ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರದಲ್ಲಿಯೇ ಮುಂದುವರಿಯುತ್ತಿದ್ದು ಪರಿಹಾರ ಕಾಣದಂತಾಗಿದೆ.

ಇದರೊಂದಿಗೆ ಟಿ.ಟಿ ಚುಚ್ಚುಮದ್ದು ಇರುವುದು ಹಾಗೂ ಈಗ ಮಳೆಗಾಲದ ಕಾರಣ ರೈತರು ಕೆಸರು ಗದ್ದೆಯಲ್ಲಿ ಕೆಲಸ ಮಾಡಿ ಕಾಲು ಹುಣ್ಣಿನ ಆಯಿಂಟ್ ಮೆಂಟ್ ಇಲ್ಲದೇ ಪರದಾಡುವಂತಾಗಿದೆ ಆರೋಗ್ಯ ರಕ್ಷ ಸಮಿತಿಯವರಾಗಲಿ ಮತ್ತು ಅಧಿಕಾರಿಗಳಾಗಲಿ ಇತ್ತ ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುವುದರಿಂದಾಗಿ ಸರ್ಕಾರಿ ಆಸ್ಪತ್ರೆ ನಿತ್ಯ ಸುದ್ದಿಯಲ್ಲಿರುವಂತಾಗಿದೆ.

Leave A Reply

Your email address will not be published.

error: Content is protected !!