Hosanagara | ನಡೆದು ಹೋಗುತ್ತಿದ್ದ ಮಹಿಳೆಗೆ ಬೈಕ್‌ನಲ್ಲಿ ಬಂದ ಯುವಕರಿಂದ ಚೂರಿ ಇರಿತ !

0 4,037

ಹೊಸನಗರ : ಪಟ್ಟಣದ ಪಾರ್ಲರ್ ಒಂದರಲ್ಲಿ ಕೆಲಸ ಮಾಡುವ ಮಹಿಳೆಗೆ ಗಣಪತಿ ದೇವಸ್ಥಾನ ರಸ್ತೆಯ ದೇವಸ್ಥಾನದ ಎದುರಿನ ಮನೆಯಲ್ಲಿ ಊಟ ಮುಗಿಸಿ ಪಾರ್ಲರ್ ಗೆ ಮರಳುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಚಾಕುವಿನಿಂದ ಮಹಿಳೆ ಬಲಗೈ ಬಲ ತೋಳಿನ ಮೇಲ್ಭಾಗ ಇರಿದು ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಪಟ್ಟಣದಲ್ಲಿ ಪ್ರಥಮವಾಗಿ ಇಂತಹ ಘಟನೆ ನಡೆದಿದ್ದು ನಾಗರಿಕರಲ್ಲಿ ದಿಗ್ಭ್ರಮೆ ಉಂಟುಮಾಡಿದ್ದು, ಗಾಯಗೊಂಡ ಮಹಿಳೆ ನಾಜೀಮಾ (38) ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಬಂದ ಯುವಕರು ಬೈಕ್ ಚಾಲಕ ಹೆಲ್ಮೆಟ್ ಧರಿಸಿದ್ದು ಹಿಂಬದಿ ಸವಾರ ಮಾಸ್ಕ್ ಹಾಕಿದ್ದನೆಂದು ಗಾಯಗೊಂಡ ಮಹಿಳೆ ತಿಳಿಸಿದ್ದು ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ.

ಗಾಯಾಳು ನಾಜಿಮಾ ಬುರ್ಖಾ ಧರಿಸಿದ್ದರು ಬುರ್ಖಾದ ಬಲ ತೋಳಿನ ಮೇಲ್ಭಾಗ ಚಾಕುವಿನ ಇರಿತಕ್ಕೆ ಕತ್ತರಿಸಿ ಹೋಗಿದೆ.
ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave A Reply

Your email address will not be published.

error: Content is protected !!