ಚುನಾಯಿತ ಸದಸ್ಯರ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಕಿಡಿ: ಬ್ಯಾನರ್ ಮೂಲಕ ಎಚ್ಚರಿಕೆ

Written by Koushik G K

Published on:

ಸಾಗರ : ಗ್ರಾಮ ಪಂಚಾಯತ್‌ನ ಸದಸ್ಯರ ನಿರ್ಲಕ್ಷ್ಯಕ್ಕೆ ಬೇಸತ್ತು ಗ್ರಾಮಸ್ಥರು ಸಿಡಿದಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ, ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸದ ಗ್ರಾಮಪಂಚಾಯತ್ ಸದಸ್ಯನ ವಿರುದ್ಧ ಬ್ಯಾನರ್ ಹಾಕಿ ಖಂಡನೆ ವ್ಯಕ್ತಪಡಿಸಿರುವ ಘಟನೆ ಕಾಪ್ಟೆಮನೆ ಗ್ರಾ (ಹೆಗ್ಗೋಡು ಗ್ರಾ.ಪಂ), ಸಾಗರ ತಾಲೂಕಿನಲ್ಲಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಗ್ರಾಮದ ಪ್ರಮುಖ ಸ್ಥಳದಲ್ಲಿ ಹಾಕಲಾದ ಈ ಬ್ಯಾನರ್ ಗ್ರಾಮದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗ್ರಾಮಸ್ಥರ ಹೇಳಿಕೆಯಿಂದ ತಿಳಿದುಬಂದಂತೆ, “ನಾವು ಹಲವು ಸಮಯಗಳಿಂದ ರಸ್ತೆ, ಕುಡಿಯುವ ನೀರು, ಬೀದಿ ದೀಪಗಳ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿದ್ದೇವೆ. ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತಂದಿದ್ದರೂ, ಅವರು ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ.”

“ಇದು ನಮ್ಮ ವೇದನೆ, ಕೋಪ, ಹಾಗು ಪ್ರತಿಭಟನೆ” – ಗ್ರಾಮಸ್ಥರ ಸ್ಪಷ್ಟನೆ

ಗ್ರಾಮಸ್ಥರು ಈ ಬ್ಯಾನರ್ ಬಗ್ಗೆ ಗ್ರಾಮ ಪಂಚಾಯತ್‌ಗೆ ತಿಳಿಸಿದ್ದರೂ, ಇದುವರೆಗೆ ಯಾವುದೇ ಅಧಿಕಾರಿಗಳು ಅಥವಾ ಸದಸ್ಯರು ಸ್ಥಳಕ್ಕೆ ಬೇಟಿ ನೀಡಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ನಿರಾಶೆ ಮೂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸಮಸ್ಯೆಗಳ ಕಡೆ ಗಮನವಿಲ್ಲ ಎಂಬ ಅಭಿಪ್ರಾಯ ಹೆಚ್ಚಾಗಿದೆ.

Leave a Comment