ಗಣೇಶ ಹಬ್ಬ ಮತ್ತು ಈದ್-ಮಿಲಾದ್ ಹಿನ್ನೆಲೆ ಪೊಲೀಸರಿಂದ ರೂಟ್ ಮಾರ್ಚ್

Written by Mahesha Hindlemane

Published on:

ಹೊಸನಗರ ; ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಬರುತ್ತಿದ್ದು ಪ್ರತಿಯೊಬ್ಬರು ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಹೊಸನಗರ ತಾಲ್ಲೂಕಿನಲ್ಲಿ ಹಿಂದಿನಿಂದಲ್ಲೂ ಶಾಂತಿ ಸಹಬಾಳ್ವೆಯಿಂದ ಜನರು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಹಾಗೂ ಸಬ್ಇನ್ಸ್‌ಪೆಕ್ಟರ್ ಶಂಕರ ಗೌಡ ಪಾಟೀಲ್‌ ಸಾರ್ವಜನಿಕರಿಗೆ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ವಿಶೇಷ ಕಾರ್ಯಪಡೆ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡ ಸಾರ್ವಜನಿಕರಿಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ರೂಟ್ ಮಾರ್ಚ್ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು.

ಈ ರೂಟ್ ಮಾರ್ಚ್ ಸಂದರ್ಭದಲ್ಲಿ ಹೊಸನಗರ ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿಗಳು, ಎಸ್.ಎ.ಎಫ್ ತಂಡದ ಇನ್ಸ್‌ಪೆಕ್ಟರ್ ಕೀರ್ತಿಕುಮಾರ್, ಆರ್.ಎಸ್.ಐ ಗಣೇಶ್ ಭಾಗವಹಿಸಿದ್ದರು.


ರಿಪ್ಪನ್‌ಪೇಟೆ ; ಈದ್‌ಮಿಲಾದ್-ಗಣಪತಿ ಹಬ್ಬದ ಪ್ರಯುಕ್ತ ರೂಟ್ ಮಾರ್ಚ್

ರಿಪ್ಪನ್‌ಪೇಟೆ ; ಮುಂಬರುವ ಗಣೇಶ ಮತ್ತು ಈದ್‌ಮಿಲಾದ ಹಬ್ಬದ ಅಂಗವಾಗಿ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್ ಹೆಬ್ಬಾಳ್ ಮತ್ತು ಪಿಎಸ್‌ಐ ರಾಜುರೆಡ್ಡಿ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯವರ ನೇತೃತ್ವದಲ್ಲಿ ಇಂದು ರೂಟ್ ಮಾರ್ಚ್ ಮಾಡುವ ಮೂಲಕ ಮೆರವಣಿಗೆಯ ಮಾರ್ಗವನ್ನು ಪರಿಶೀಲನೆ ನಡೆಸಿದರು. ನಂತರ ವಿನಾಯಕ ವೃತ್ತ ಮತ್ತು ಹೊಸನಗರ, ಸಾಗರ, ತೀರ್ಥಹಳ್ಳಿ ರಸ್ತೆಯಲ್ಲಿ ಪೊಲೀಸ್ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಉಮೇಶ, ಸಂತೋಷ, ಯೋಗೀಶ್, ಇನ್ನಿರ ಸಿಬ್ಬಂದಿವರ್ಗ ಹಾಜರಿದ್ದರು.

Leave a Comment