ಗರ್ತಿಕೆರೆ ; ಮನೆಯೊಳಗೆ ಅಡಗಿದ್ದ ನಾಗರಹಾವು ಸುರಕ್ಷಿತವಾಗಿ ಸೆರೆ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಗರ್ತಿಕೆರೆಯ ಗುರುಕರುಣೆ ಆಟೋ ಚಾಲಕ ಚಂದ್ರಶೇಖರ ಎಂಬುವರ ಮನೆಯಲ್ಲಿ ಅಡಗಿದ್ದ ಸುಮಾರು ಆರು ಅಡಿ ಉದ್ದದ ನಾಗರಹಾವನ್ನು ರಿಪ್ಪನ್‌ಪೇಟೆಯ ಉರಗ ಸಂರಕ್ಷಕ ಗಂಗಾಧರ್ ಎಂಬುವರು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಾತ್ರಿ ವೇಳೆಯಲ್ಲಿ ಮನೆಯೊಳಗೆ ಶಬ್ದ ಮಾಡುವುದನ್ನು ಗಮನಿಸಿದ ಮನೆಯವರು ಹಾವು ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕೂಡಲೇ ಗಂಗಾಧರನಿಗೆ ವಿಷಯ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಗಂಗಾಧರ್ ಸುರಕ್ಷಿತವಾಗಿ ಹಾವನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಮೂಲಕ ಮನೆಯವರು ನಿಟ್ಟುಸಿರು ಬಿಡುವಂತಾಯಿತು‌‌.

Leave a Comment