ಟ್ಯಾಂಕರ್ ಪಲ್ಟಿ ; ಮಣ್ಣು ಪಾಲಾಯ್ತು 20 ಸಾವಿರ ಲೀ. ಹಾಲು !

Written by Mahesha Hindlemane

Published on:

ಹೊಸನಗರ ; ಹಾಲು ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ 20 ಸಾವಿರ ಲೀ. ಹಾಲು ಮಣ್ಣು ಪಾಲಾದ ಘಟನೆ ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮಾರುತಿಪುರ ಸಮೀಪದ ಮಾವಿನಹೊಳೆಯಲ್ಲಿ ನಿನ್ನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಶಿವಮೊಗ್ಗ ಕಡೆಯಿಂದ ಕಾಸರಗೋಡಿಗೆ ತೆರಳುತ್ತಿದ್ದ ಲಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. 20 ಸಾವಿರ ಲೀಟರ್‌ ಸಾಮರ್ಥ್ಯ ಹೊಂದಿದ್ದ ಟ್ಯಾಂಕರ್ ಲಾರಿ ಪಲ್ಟಿಯಾದ ರಭಸಕ್ಕೆ ಹಾಲು ಹೊಳೆಯಂತೆ ಹರಿಯಿತು. ಘಟನೆಯಲ್ಲಿ ಚಾಲಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

Leave a Comment