ಶಿವಮೊಗ್ಗ ; ವಿದ್ಯಾರ್ಥಿಯೋರ್ವ ತಂದೆ ಸಾವಿನ ದುಃಖದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಘಟನೆ ನಡೆದಿರುವುದು ಶಿವಮೊಗ್ಗದಲ್ಲಿ ನಡೆದಿದೆ.

ಹೌದು, ಇಂದು ಎಸ್‌ಎಸ್‌ಎಲ್‌ಸಿ ಗಣಿತ ಪರೀಕ್ಷೆ ಇತ್ತು. ಈ ನಡುವೆ ಶಿವಮೊಗ್ಗ ತಾಲ್ಲೂಕಿನ ಮಂಡಘಟ್ಟ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ತನ್ನ ತಂದೆಯ ಸಾವಿನ ನೋವಿನಲ್ಲೇ ಇಂದು ಪರೀಕ್ಷೆ ಬರೆದಿದ್ದಾನೆ.

ನಿನ್ನೆ ಪ್ರೀತಂ ತಂದೆ ಮಂಜುನಾಥ್ ಅವರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪ್ರೀತಂ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಗೈರಾಗಿದ್ದನು. ವಿಷಯ ತಿಳಿದ ಬಿಇಒ ರಮೇಶ್ ಅವರು ವಿದ್ಯಾರ್ಥಿ ಪ್ರೀತಂ ಮನೆಗೆ ತೆರಳಿ ಧೈರ್ಯ ತುಂಬಿದ್ದಾರೆ. ನಂತರ ವಿದ್ಯಾರ್ಥಿ ಪ್ರೀತಂನನ್ನ ತಮ್ಮ ಜೀಪ್ ನಲ್ಲೇ ಆಯನೂರು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದರು. ಈ ಮೂಲಕ ತಂದೆಯ ಸಾವಿನ ದುಃಖದಲ್ಲೂ ಪ್ರೀತಂ ಪರೀಕ್ಷೆ ಬರೆದಿದ್ದಾನೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





