ರಿಪ್ಪನ್ಪೇಟೆ : ಬದುಕು ಎಲ್ಲವನ್ನೂ ಕಲಿಸುತ್ತದೆ. ಕಲಿಯುವ ಮನಸ್ಸಿರಬೇಕಷ್ಟೆ. ಜೀವನದಲ್ಲಿ ಎದುರಾಗುವ ಪ್ರತಿ ಘಟನೆಯೂ ಒಂದು ಪಾಠವೇ ಹಾಗಾಗಿ ಜವಾಬ್ದಾರಿ ಇಲ್ಲದವನು ಮುಂಜಾನೆ ಏಳಲು ನೂರು ಬಾರಿ ಯೋಚಿಸುತ್ತಾನೆ. ಜವಾಬ್ದಾರಿ ಇದ್ದವನು ನಿದ್ರೆಯಲ್ಲೂ ಎದ್ದಿರುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಿರಬೇಕೆಂದು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಹಾರಂಬಳ್ಳಿಯ ಶ್ರೀಈಶ್ವರ ಹಾಗೂ ಪರಿವಾರದೇವರುಗಳ ಪ್ರತಿಷ್ಟಾಪನೆಯ 48ನೇ ದಿನದ ಮಂಡಲ ಪೂಜಾ ಅಂಗವಾಗಿ ಏರ್ಪಡಿಸಲಾಗಿದ್ದ ಇಷ್ಟಲಿಂಗಪೂಜೆ ರುದ್ರಾಭಿಷೇಕ ಪೂಜೆ ಹಾಗೂ ಧರ್ಮ ಸಮಾರಂಭದ ದಿವ್ಯಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.
ಬದುಕಿಗೆ ಭಯ ಮುಖ್ಯವಲ್ಲ. ಭರವಸೆ ಮುಖ್ಯವೆಂದು ಹೇಳಿ ಧರ್ಮದ ಪರಿಪಾಲನೆಯಿಂದ ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳಸಿಕೊಳ್ಳುವಲಿ ನಮ್ಮ ಯುಜನಾಂಗ ಮುಂದಾಗಬೇಕು ಎಂದ ಅವರು ಸತ್ಕಾರ್ಯಗಳಿಗೆ ದಾನ ಮಾಡುವ ಪ್ರವೃತ್ತಿ ಸರ್ವರಲ್ಲಿ ಬರಲೆಂದು ತಿಳಿಸಿದರು. ನಂತರ ದೇವಸ್ಥಾನಕ್ಕೆ ಧಾನ ನೀಡಿದವರಿಗೆ ಶ್ರೀಗಳಿಂದ ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಈಶ್ವರ ಮತ್ತು ಪರಿವಾರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ನಿರ್ದೇಶಕರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





