ಬಾಳೆಬರೆ ಘಾಟ್‌ನಲ್ಲಿ ಟ್ಯಾಂಕರ್ ಲಾರಿ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಅಪಘಾತ ; ಮಾನವೀಯತೆ ಮೆರೆದ ಆರ್.ಎಂ.ಎಂ. ಮತ್ತು ಸ್ಥಳೀಯ ವೈದ್ಯರು

Written by malnadtimes.com

Published on:

ಹೊಸನಗರ ; ತಡರಾತ್ರಿ ಮಾಸ್ತಿಕಟ್ಟೆ – ಕುಂದಾಪುರ ಬಾಳೆಬರೆ ಘಾಟಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ಯಾಂಕರ್‌ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ಸಿನಲ್ಲಿದ್ದ ಸಾಕಷ್ಟು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಮಾಸ್ತಿಕಟ್ಟೆಯ ಶಾಲೋಮ್ ಆಸ್ಪತ್ರೆಯಲ್ಲಿ ಜನಸ್ನೇಹಿ ಡಾಕ್ಟರ್‌ಗಳಾದ
ಡಾ. ಸುದೀಪ್ ಡಿಮೆಲೋ ಹಾಗು ಡಾ. ಪ್ರದೀಪ್ ಡಿಮೆಲ್ಲೋ ಅವರು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ಉಚಿತವಾಗಿ ತುರ್ತು ಚಿಕಿತ್ಸೆ ನೀಡಿ ಮಾನವಿಯತೆ ಮೆರೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೆಚ್ಚಿನ ಚಿಕಿತ್ಸೆಯ ಆವಶ್ಯಕತೆ ಇದ್ದಂತಹ ಗಾಯಾಳುಗಳನ್ನು ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ. ಆರ್.ಎಂ ಮಂಜುನಾಥ್ ಗೌಡ, ಅವರ ಕೊಡಚಾದ್ರಿ ಯುವಕರ ಪಡೆಯ ಸಹಕಾರದೊಂದಿಗೆ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಆಂಬುಲೆನ್ಸ್‌ ಹಾಗೂ ಇತರೆ ವಾಹನಗಳ ವ್ಯವಸ್ಥೆಯನ್ನು ಮಾಡಿ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಎಲ್ಲಾ ಗಾಯಾಳುಗಳಿಗೆ ಭೋಜನದ ವ್ಯವಸ್ಥೆ ನೀಡಿ ಮಕ್ಕಳು, ಮಹಿಳೆಯರಿಗೆ ಮತ್ತು ಗಾಯಾಳುಗಳಿಗೆ ಅವರವರ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ.

ತಡರಾತ್ರಿಯಲ್ಲೂ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮತ್ತು ಡಾಕ್ಟರ್ ಚಿಕಿತ್ಸೆ ಬಗ್ಗೆ ಡಾ. ಆರ್.ಎಂ ಮಂಜುನಾಥ ಗೌಡ ಅವರ ಸಹಕಾರದ ಬಗ್ಗೆ ರೋಗಿಗಳು ಹಾಗೂ ಸಂಬಂಧಿಕರು ಧನ್ಯವಾದಗಳು ತಿಳಿಸಿದರು.

ಸ್ಥಳಕೆ ಪೊಲೀಸ್ ಸಿಬ್ಬಂದಿ ಅರುಣೋದಯ ಧಾವಿಸಿ ಟ್ರಾಫಿಕ್ ನಿಯಂತ್ರ ಮಾಡಿ ವಾಹನ ಸಂಚರಿಸುವಂತೆ ಮಾಡಿದರು.

ಈ ಸಂದರ್ಭದಲ್ಲಿ ಜೆಸಿ ಆಸ್ಪತ್ರೆ ತೀರ್ಥಹಳ್ಳಿ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್, ಮಾಸ್ತಿಕಟ್ಟೆಯ ಲಾಯ್ಡ್ ಡಿಸೋಜಾ, ವಾಸುದೇವ ಕಾಮತ್ ಕಾರ್ತಿಕ್ ಗೌಡ ಅನುಷ್ ಶೆಟ್ಟಿ ಪ್ರಜ್ವಲ್ ಪೂಜಾರಿ ಆಲ್ವಿನ್ ಡೆಮಲ್ಲು, ಉಪಸ್ಥಿತರಿದ್ದರು.

Leave a Comment