ತೀರ್ಥಹಳ್ಳಿ: ಇಲ್ಲಿನ ಹೆಸರಾಂತ ನಟಮಿತ್ರರು ಹವ್ಯಾಸಿ ಕಲಾ ಸಂಘದ ಹಿರಿಯ ಮತ್ತು ಕಿರಿಯ ಕಲಾವಿದರ ಸಮ್ಮಿಲನದಲ್ಲಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಹೆಸರಾಂತ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಆ ಊರು ಈ ಊರು” ನಾಟಕ ತಾಲೂಕಿನ ರಂಗಾಸಕ್ತರ ಮೆಚ್ಚುಗೆಗಳಿಸಿತು.
ಗಣೇಶ ಹಬ್ಬದ ಅಂಗವಾಗಿ ಆ.27 ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ
ಡಾ.ಜಿ.ಬಿ.ಜೋಷಿ(ಜಡಭಾರತ)ರವರ ರಚನೆಯ ಈ ನಾಟಕವು ಹುಲಗಪ್ಪ ಕಟ್ಟಿಮನಿಯವರ ವಿಭಿನ್ನ ಶೈಲಿಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.ಶಿವಕುಮಾರ ಟಿ.ಆರ್.ರವರ ಸಹ ನಿರ್ದೇಶನ ಮತ್ತು ಬೆಳಕು,ಅರವಿಂದ್ ಟಿ.ಎನ್.ರವರ ರಂಗಸಜ್ಜಿಕೆ,ಗುರುರಾಜ್.ಪಿ.ವಿ.ಯವರ ಪ್ರಸಾಧನ ಹಾಗೂ ಹರಿ ವಿನಾಯಕ್ ರವರ ಸಂಗೀತ ನಿರ್ವಹಣೆ ಒಟ್ಟಾರೆ ನಾಟಕದ ಎರಡು ಯಶಸ್ವಿ ಪ್ರದರ್ಶನಕ್ಕೆ ಮೆರಗು ನೀಡಿತು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650