Hosanagara

ಹೊಸನಗರ ; ಮೆಡಿಕಲ್ ಶಾಪ್ ಮಾಲೀಕರಿಂದ ತಹಸೀಲ್ದಾರ್‌ಗೆ ಮನವಿ

ಹೊಸನಗರ : ಇಲ್ಲಿನ ಮೆಡಿಕಲ್ ಶಾಪ್ ಜಿಲ್ಲಾ ಮೆಡಿಕಲ್ಸ್‌ ಶಾಪ್ ಮಾಲೀಕರ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪರ ನೇತೃತ್ವದಲ್ಲಿ ತಾಲ್ಲೂಕು ಕಂದಾಯ ಇಲಾಖೆಯ ಶಿರಸ್ತೆದಾರ್ ಕಟ್ಟೆ ಮಂಜುನಾಥ್‌ರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಘದ ಉಪಾಧ್ಯಕ್ಷ ದತ್ತಾತ್ರೇಯ ಉಡುಪ, ಭಾರತ ದೇಶ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಹೊರತು ಪಡಿಸಿ ಆನ್‌ಲೈನ್ ಮೂಲಕ ಔಷಧಿಗಳು ಬರುತ್ತಿದೆ. ದೇಶ ವ್ಯಾಪ್ತಿಯಲ್ಲಿ ಔಷಧಿಗಳ ದರದಲ್ಲಿ ವ್ಯತ್ಯಾಸದಲ್ಲಿ ಔಷಧಿಗಳು ಸಿಗುತ್ತಿದೆ ಇದರ ಜೊತೆಗೆ ಅತೀ ಕಳಪೆ ಮಟ್ಟದ ಔಷಧಿಗಳು ಸರಬರಾಜು ಆಗುತ್ತಿದ್ದು ಇವುಗಳನ್ನು ತಡೆಯಬೇಕಾದರೆ ಒಂದು ದಿನದ ಮಟ್ಟಿಗೆ ಔಷಧಿ ಅಂಗಡಿಗಳನ್ನು ಬಂದ್ ಅನಿವಾರ್ಯತೆಯಾಗಿದ್ದು ನಾವು ನಮ್ಮ ಔಷಧಿ ಅಂಗಡಿಗಳನ್ನು ಉಳಿಸಿಕೊಳ್ಳಬೇಕಾದರೆ ಸರ್ಕಾರ ಹಾಗೂ ಆರೋಗ್ಯ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಆನ್‌ಲೈನ್ ಸೇವೆ, ದರದಲ್ಲಿ ವ್ಯತ್ಯಾಸ ಹಾಗೂ ಕಳಪೆ ಗುಣಮಟ್ಟದ ಔಷಧಿ ಸರಬರಾಜು ನಿಲ್ಲಿಸಬೇಕೆಂದು ಹಾಗೂ ಜನೌಷಧಿ ಕೇಂದ್ರಗಳಲ್ಲಿ ಸರ್ಕಾರದ ಔಷಧಿಗಳನ್ನು ಬಿಟ್ಟು ನಮ್ಮ ಮೆಡಿಕಲ್ ಶಾಪ್ ನಲ್ಲಿ ಸಿಗುವಂಥಹ ಔಷಧಿಗಳನ್ನು ಮಾರಾಟ ಮಾಡುತ್ತಿದ್ದಾರೆ ಇದರಿಂದ ಎಲ್ಲ ಮೆಡಿಕಲ್ಸ್‌ ಗಳಿಗೆ ವ್ಯಾಪಾರದಲ್ಲಿ ತೊಂದರೆಯಾಗುತ್ತಿದೆ ಇದನ್ನು ತಡೆ ಹಿಡಿಯುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಸಣ್ಣಕ್ಕಿ ಮೆಡಿಕಲ್ ಮಾಲೀಕ ಸಣ್ಣಕ್ಕಿ ಮಂಜು, ದೀಪಕ್ ಮೆಡಿಕಲ್ ಮಾಲೀಕ ದೀಪಕ್, ಕಾರ್ತಿಕ್ ಮೆಡಿಕಲ್ಸ್ ಮಾಲೀಕ ಕಾರ್ತಿಕ್, ಯಡೂರು ಮೆಡಿಕಲ್ ಮಾಲೀಕರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>