SHIVAMOGGA ; ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿವಮೊಗ್ಗ ನಗರದ ಸಿದ್ದಯ್ಯ ರೋಡ್ ಸರ್ಕಲ್ ಬಳಿ ನಡೆದಿದೆ.
ಹೇಗಾಯ್ತು ಘಟನೆ ?
ಹೊಸ ವರ್ಷದ ಮತ್ತಿನಲ್ಲಿ ಕಾರಿಗೆ ಕಲ್ಲು ಹೊಡೆದು ಬೈಕ್ ಸವಾರ ಪರಾರಿಯಾಗುತ್ತಿದ್ದ. ಇದರಿಂದ ಸಿಟ್ಟಗೆದ್ದ ಕಾರು ಚಾಲಕ ಬೈಕ್ ಚೇಸ್ ಮಾಡಿಕೊಂಡು ಬಂದಿದ್ದ. ಈ ವೇಳೆ ಗಾಯತ್ರಿ ಶಾಲೆ ಬಳಿ ಹಂಪ್ ಕಾಣದೆ ಇಬ್ಬರು ಸವಾರರು ಕಾರು ಮತ್ತು ಬೈಕ್‌ನ್ನು ಹಾರಿಸಿದ್ದರು. ಈ ಹಿನ್ನೆಲೆ ಕಾರು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕಾರಿನಲ್ಲಿದ್ದ ಇಬ್ಬರು ಹುಡುಗಿಯರು ಅಪಾಯದಿಂದ ಪಾರಾಗಿದ್ದಾರೆ. ಕಾರು ಚಾಲಕನಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.