
ಹೊಂಬುಜದಲ್ಲಿ ಜನಿವಾರ ಧಾರಣೆ ಪರ್ವ ; ಜೀವನದಲ್ಲಿ ಸಮ್ಯಕ್ತ್ವ ಪ್ರಾಪ್ತಿಗಾಗಿ ರತ್ನತ್ರಯ ಧಾರಣೆ : ಶ್ರೀಗಳು
ಹೊಸನಗರ : ‘ಜೀವನದಲ್ಲಿ ಧರ್ಮ ಪರಿಪಾಲನೆಯನ್ನು ನಿರಂತರ ಮಾಡುವುದರಿಂದ ಸಾತ್ವಿಕ ಮನೋಭಾವವು ಸ್ಪುರಿಸುತ್ತದೆ. ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ-ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಮಹತ್ವವಾಗಿದೆ’ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದ ಪೀಠಾಧೀಶ…








