ಮಳೆ ಕೊರತೆ ಬೆಳೆ ನಾಶ ; ಕಾಫಿನಾಡಿನಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ !

0 47

ಅಜ್ಜಂಪುರ : ಮಳೆ ಕೊರತೆಯಿಂದ ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾದ ಹಿನ್ನೆಲೆ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ.

ಪರಮೇಶ್ವರಪ್ಪ (52) ಆತ್ಮಹತ್ಯೆಗೆ ಶರಣಾದ ರೈತ. ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದರು. ಬ್ಯಾಂಕ್ ಸಾಲ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಒಂದು ಕಡೆ ಸಾಲ ಮತ್ತೊಂದು ಕಡೆ ಈರುಳ್ಳಿ ಬೆಳೆ ನಾಶವಾದ ಹಿನ್ನೆಲೆ ಮನನೊಂದು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಾಫಿನಾಡಿನಲ್ಲಿ ಇಂದು ಆತ್ಮಹತ್ಯೆಗೆ ಶರಣಾದ ರೈತ ಸೇರಿದಂತೆ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಗಿರಿಯಾಪುರದ ರೈತ ಸತೀಶ್ ಆತ್ಮಹತ್ಯೆಗೆ ಶರಣಾಗಿದ್ದರು.

ಅಜ್ಜಂಪುರ ತಾಲೂಕು ಚಿಕ್ಕನಲ್ಲೂರು ಗ್ರಾಮದ ರೈತ ಪರಮೇಶ್ವರಪ್ಪ ಆತ್ಮಹತ್ಯೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

_________________________________

ಬರಕ್ಕೆ ಚಿಕ್ಕಮಗಳೂರಿನಲ್ಲಿ ಈ ವರ್ಷ ಮೊದಲ ರೈತನ ಬಲಿಯಾಗಿದೆ. ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಸತೀಶ್ (48) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದುಬಂದಿದೆ.

ಮೃತ ಸತೀಶ್

ಮಳೆ ನಂಬಿ ರೈತ ಸತೀಶ್ ಈರುಳ್ಳಿ ಬೆಳೆದಿದ್ದರು. ಮಳೆ ಕೈಕೊಟ್ಟ ಹಿನ್ನೆಲೆ ಈರುಳ್ಳಿ ಬೆಳೆ ನಾಶವಾಗಿದೆ. ಮೃತ ರೈತ ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ವಿವಿಧ ಕಡೆ ಸಾಲ ಮಾಡಿದ್ದರು. ಬಿತ್ತನೆ ಬೀಜ, ಕೂಲಿ ಸೇರಿದಂತೆ ಸಾವಿರಾರು ರೂಪಾಯಿ ಸಾಲ ಮಾಡಿದ್ದರು.

ವರುಣ ಕೈಕೊಟ್ಟ ಕಾರಣ ಈರುಳ್ಳಿ ಬೆಳೆ ಒಣಗಿತ್ತು. ಇದರಿಂದ ರೈತ ಸತೀಶ್ ಸಂಕಷ್ಟಕ್ಕೀಡಾಗಿದ್ದರು. ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಇನ್ನೂ ಸಾಲಕ್ಕೆ ಹೆದರಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!