ಕಾಡ್ಗಿಚ್ಚು ; ಹೊತ್ತಿ ಉರಿದ ಅರಣ್ಯ ಪ್ರದೇಶ !
ಚಿಕ್ಕಮಗಳೂರು : ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದ್ದು, ಅರಣ್ಯ ಪ್ರದೇಶ ಧಗಧಗಿಸಿ ಉರಿತ್ತಿದ್ದ ಘಟನೆ ತಾಲೂಕಿನ ಪವಿತ್ರವನ ಸಮೀಪದ ಚುರ್ಚೆಗುಡ್ಡ ಎಂಬಲ್ಲಿ ಫೆ. 10ರ ಬೆಳಗ್ಗೆ ಸಂಭವಿಸಿದೆ.
ಚುರ್ಚೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಇಡೀ ರಾತ್ರಿ ಕಾಡ್ಗಿಚ್ಚು ಹಬ್ಬಿದ್ದು, ನೂರಾರು ಎಕರೆ ಅರಣ್ಯ ಸಂಪತ್ತು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಯಾವುದೇ ವನ್ಯಜೀವಿಗಳು ಬೆಂಕಿಗೆ ಸಿಲುಕಿ ಮೃತಪಟ್ಟಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆಂಕಿ ನಂದಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗಳ ಹರಸಾಹಸ ಪಟ್ಟಿದ್ದಾರೆ.