ಲೋಕ್ ಅದಾಲತ್‌ನಿಂದ ದಾವೆದಾರರ ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಹಕಾರಿ ; ನ್ಯಾಯಾಧೀಶ ರವಿಕುಮಾರ್.ಕೆ

0 61


ಹೊಸನಗರ: ರಾಜ್ಯದಲ್ಲಿ ಲೋಕ್ ಅದಾಲತ್ ಕಾರ್ಯಕ್ರಮಗಳು ನ್ಯಾಯಾಲಯದಲ್ಲಿ ನಡೆಸುತ್ತಿರುವುದರಿಂದ ಸಾರ್ವಜನಿಕರ ಅಮೂಲ್ಯ ಸಮಯದ ಜೊತೆಗೆ ನ್ಯಾಯಾಲಯದ ಸಮಯ ವ್ಯರ್ಥವಾಗುವುದಿಲ್ಲ. ದಾವೆದಾರರ ಸಂಬಂಧಗಳೂ ಗಟ್ಟಿಯಾಗಿ ಉಳಿಯಲು ಸಹಕಾರಿಯಾಗುತ್ತದೆ ಎಂದು ಹೊಸನಗರದ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ರವಿಕುಮಾರ್ ಕೆ ಯವರು ಹೇಳಿದರು.


ಹೊಸನಗರದ ನ್ಯಾಯಾಲಯದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆದಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿ,‌ಸಿವಿಲ್ ಕೇಸು ಕ್ರಿಮಿನಲ್ ಕೇಸ್ ಗಳು ನಡೆಯುವುದು ಸಹಜ ಅದರೆ ಆ ಕೇಸುಗಳನ್ನು ತಿಂಗಳು ವರ್ಷಗಳವರೆಗೆ ಎಳೆಯುವುದಕ್ಕಿಂತ ಎದುರುದಾರರು ಮತ್ತು ದೂರು ನೀಡಿದವರು ರಾಜಿ ಮಾಡಿಕೊಂಡು ನೆಮ್ಮದಿಯಿಂದ ಬದುಕುವುದು ದೊಡ್ಡಗುಣ. ರಾಜಿ ಸಂಧಾನಕ್ಕಾಗಿಯೇ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ಜಾರಿ ಮಾಡಲಾಗಿದ್ದು ಈ ಸಂದರ್ಭದಲ್ಲಿ ರಾಜಿ ಮಾಡಲು ಸಾಧ್ಯವಾಗುವಂತಹ ಪ್ರಕರಣಗಳನ್ನು ಎದುರುದಾರ ಮತ್ತು ದೂರುದಾರರ ಸಮ್ಮುಖದಲ್ಲಿ ನ್ಯಾಯಬದ್ಧವಾದ ತೀರ್ಮಾನಗಳನ್ನು ಮಾಡಿ ರಾಜಿ ಮಾಡಲಾಗುವುದು ನ್ಯಾಯಾಲಯದಲ್ಲಿರುವ ಹೆಚ್ಚಿನ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದರು.


ಹೊಸನಗರದ ಹಿರಿಯ ವ್ಯವಹಾರ ನ್ಯಾಯಾಲಯದ ನ್ಯಾಯಧೀಶೆ ಪುಷ್ಪಲತಾ ಕೆ ಯವರು ಈ ಸಂದರ್ಭದಲ್ಲಿ ಮಾತನಾಡಿ, ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಹಿರಿಯ ಶ್ರೇಣಿ ನ್ಯಾಯಾಲಯ 97 ಪ್ರಕರಣಗಳು ಅದಾಲತ್‌ಗೆ ಬಂದಿದ್ದು ಅದರಲ್ಲಿ 14 ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರ ಜೊತೆಗೆ 65,72,289 ರೂ. ಮತ್ತು ಪ್ರಧಾನ ವ್ಯವಹಾರ ನ್ಯಾಯಾಲಯದಿಂದ 801 ಪ್ರಕರಣಗಳಲ್ಲಿ 712 ಪ್ರಕರಣಗಳನ್ನು ಇತ್ಯರ್ಥ ಪಡಿಸುವುದರ ಜೊತೆಗೆ 41,34,960 ರೂಪಾಯಿಗಳು ಹಾಗೂ ಹೆಚ್ಚುವರಿ ನ್ಯಾಯಾಲಯದಲ್ಲಿ 516 ಪ್ರಕರಣಗಳಲ್ಲಿ 446 ಪ್ರಕರಣಗಳನ್ನು ಇತ್ಯರ್ಥ ಪಡಿಸಿ 16,14,508 ರೂಪಾಯಿಗಳನ್ನು ಇತ್ಯರ್ಥ ಪಡಿಸಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಲೋಕ್ ಅದಾಲತ್ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು‌. ಸರ್ಕಾರಿ ಅಭಿಯೋಜಕರುಗಳಿಗೆ ಪೊಲೀಸ್ ಇಲಾಖೆಗೆ ಇನ್ಶುರೆನ್ಸ್‌ ಕಂಪನಿಗಳಿಗೆ ಸಂಧಾನಕಾರರು, ವಕೀಲರುಗಳು, ಬ್ಯಾಂಕ್ ಅಧಿಕಾರಿಗಳು, ಅರಣ್ಯ ಇಲಾಖೆ, ಅಭಕಾರಿ ಇಲಾಖೆ, ನ್ಯಾಯಾಲಯದ ಸಿಬ್ಬಂದಿಗಳು ಲೋಕ್ ಅದಾಲತ್ ಯಶಸ್ವಿಯಾಗಲೂ ಕಾರಣರಾದ ಎಲ್ಲರನ್ನು ಅಭಿನಂದಸಿದರು.


ಈ ರಾಷ್ಟ್ರೀಯ ಅದಾಲತ್ ಕಾರ್ಯಕ್ರಮದಲ್ಲಿ ಮದುವೆಯಾಗಿ 9 ವರ್ಷವಾಗಿದ್ದ ವೀರೇಶ್ ಮತ್ತು ಉಷಾರವರು ಇತ್ತಿಚೆಗೆ ಸಂಸಾರದಲ್ಲಿ ಬಿರುಕು ಬಿಟ್ಟು ಬೇರೆಯಾಗಿದ್ದು ಅವರನ್ನು ಹೊಸನಗರ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶರಾದ ರವಿಕುಮಾರ್ ಕೆ ಹಾಗೂ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಲತಾರವರು ಒಂದು ಮಾಡಿದರು.


ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ವಾಲೆಮನೆ ಶಿವಕುಮಾರ್, ಹಿರಿಯಪ್ಪ, ಷಣ್ಮುಖಪ್ಪ, ಚಂದ್ರಪ್ಪ, ಕೆ.ಎಸ್. ವಿನಾಯಕ, ವೈ.ಪಿ ಮಹೇಶ್, ಗುರುಕಿರಣ್, ಬಸವರಾಜ್ ಮಂಡಾಣಿ ಗುರುರಾಜ್, ಅಮೃತ ದೂನ, ಸವಿತಾ, ಶರಣಪ್ಪ, ಗುರುಮೂರ್ತಿ, ಉಮೇಶ್, ವಿನೋದ, ಗೀತಾ, ರೇಖಾ, ಪ್ರೀತಿ, ಸುನಿಲ್, ಗುರುರಾಜ್, ಈರಪ್ಪ, ಲೋಕೇಶ್ ಲೋಕಪ್ಪ ನ್ಯಾಯಾಲಯದ ಎಲ್ಲಾ ನ್ಯಾಯಾವಾದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!