ಬಿಜೆಪಿಯ ಇಲ್ಲ ಸಲ್ಲದ ಹೇಳಿಕೆ ಶೋಭೆ ತರುವುದಿಲ್ಲ ; ಅಕ್ಮಲ್

0 100

ಚಿಕ್ಕಮಗಳೂರು : ಕಾಂಗ್ರೆಸ್ ಪಕ್ಷದಿಂದ ಮೂವರು ರಾಜ್ಯಸಭಾ ಸದಸ್ಯರು ಆಯ್ಕೆಗೊಂಡಿ ರುವುದನ್ನು ಸಹಿಸಿಕೊಳ್ಳಲಾರದೇ ಆರ್.ಅಶೋಕ್ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಕೆಪಿಸಿಸಿ ಕಿಸಾಲ್ ಸೆಲ್ ಘಟಕದ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದ್ದಾರೆ.


ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್ ಅಡ್ಡಮತದಾನ ಮಾಡಿ ಪಕ್ಷದ್ರೋಹವೆಸಗಿದ್ದಾರೆ ಎನ್ನುತ್ತಿದ್ದು ಈ ಹಿಂದೆ ರಾಜ್ಯದಲ್ಲಿ ಬಹುಮತವೇ ಇಲ್ಲದಿರುವ ವೇಳೆಯಲ್ಲಿ ಶಾಸಕರನ್ನು ಆಪರೇಷನ್ ಮಾಡಿ ಸರ್ಕಾರ ರಚಿಸಿರುವುದು ನೆನಪಿನಲ್ಲಿವೇ ಎಂದು ಪ್ರಶ್ನಿಸಿದ್ದಾರೆ.


ಕರ್ನಾಟಕ, ಗೋವಾ ಹಾಗೂ ಉತ್ತರ ಪ್ರದೇಶದ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಆಪರೇಷನ್ ಕಮಲ ದ ಹೆಸರಿನಲ್ಲಿ ಸ್ಥಳೀಯ ಸರ್ಕಾರವನ್ನು ಉರುಳಿಸಿ ಜನಾಭಿಪ್ರಾಯವನ್ನು ಧಿಕ್ಕರಿಸಿ ಅಧಿಕಾರ ನಡೆಸಿದಾಗ ಇವರಿಗೆ ಪಕ್ಷ ದ್ರೋಹವೆನಿಸಿಲ್ಲವೇ ಎಂದ ಅವರು ರಾಜ್ಯದ ಬಿಜೆಪಿ ಮುಖಂಡರುಗಳು ಈ ಹಿಂದಿನ ನಿಲುವುಗಳನ್ನು ಒಮ್ಮೆ ಮೆಲುಕು ಹಾಕಬೇಕಿದೆ ಎಂದು ಹೇಳಿದ್ದಾರೆ.


ಕರ್ನಾಟಕದ ಕಳೆದ ಸರ್ಕಾರದಲ್ಲಿ ಬಿಜೆಪಿ ಕೇವಲ ನೂರು ಸ್ಥಾನವನ್ನು ಗಳಿಸಿಕೊಳ್ಳಲಾಗದೇ ಶಾಸಕರನ್ನು ಆಪರೇಷನ್ ಕಮಲದ ಹೆಸರಿನಲ್ಲಿ ಛಿದ್ರಗೊಳಿಸಿ ರಾಜ್ಯದಲ್ಲಿ ಅಧಿಕಾರ ನಡೆಸಿರುವುದು ಕಣ್ಣಿಗೆ ಕಾಣುವುದಿಲ್ಲ ಎಂದ ಅವರು ಇದೀಗ ಓರ್ವ ಅಡ್ಡ ಮತದಾನ ಮಾಡಿದರೆ ಇವರಿಗೆ ತಾಯಿದ್ರೋಹವೆಸಗಿದಂತೆ ಹೇಳುತ್ತಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.


ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳ ಶ್ರಮದಿಂದ ರಾಜ್ಯಸಭಾದಲ್ಲಿ ಮೂರು ಸ್ಥಾನಗಳನ್ನು ಗಳಿಸಿಕೊಂಡು ಕಾಂಗ್ರೆಸ್ ಮುನ್ನಡೆಯುತ್ತಿರುವುದು ಸಂತಸದ ಸಂಗತಿ. ಹೀಗಾಗಿ ಇದನ್ನು ಸಹಿಸಿಕೊಳ್ಳಲಾಗದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹತಾಶೆಯಿಂದ ಈ ರೀತಿ ಹೇಳಿಕೆ ನೀಡಲಾಗುತ್ತಿದೆ ಎಂದು ದೂರಿದ್ದಾರೆ.

Leave A Reply

Your email address will not be published.

error: Content is protected !!