ಶಂಕಿತ ಉಗ್ರರಿಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದವರಿಗೂ ಸಂಬಂಧವಿಲ್ಲ : ಎಸ್ಪಿ

0 41

ಚಿಕ್ಕಮಗಳೂರು : ಶಂಕಿತ ಉಗ್ರರಿಗೂ ಚಿಕ್ಕಮಗಳೂರಿನಲ್ಲಿ ಬಂಧಿಸಿದವರಿಗೂ ಸಂಬಂಧವಿಲ್ಲ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

ಮಾದ್ಯಮವರ ಜೊತೆ ಮಾತನಾಡಿದ ಅವರು, ಡಕಾಯಿತಿ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರಿಂದ ಇಬ್ಬರ ಬಂಧನವಾಗಿದೆ ಎಂದರು.

ಜುಲೈ 16ರಂದು ಬೆಂಗಳೂರು ಪೊಲೀಸರು ಬೆಂಗಳೂರು ಮೂಲದ ಮಹಿಳೆ ಸೈಯದಾ, ಖಾಲಿದ್ ಎಂಬವರನ್ನು ಬಂಧಿಸಿದ್ದರು. ದಾವಣಗೆರೆಯ ಆಜಾದ್ ನಗರದಲ್ಲಿ ವಾಸವಿದ್ದ 32 ವರ್ಷದ ಫಯಾಜ್ ನನ್ನ ವಶಕ್ಕೆ ಪಡೆದಿದ್ದಾರೆ‌. ನಿನ್ನೆ ಮಧ್ಯ ರಾತ್ರಿ ಫಯಾಜ್ ನನ್ನ ವಶಕ್ಕೆ ಪಡೆದಿದ್ದಾರೆ.‌ ಇದರ ಜೊತೆಗೆ ಚಿಕ್ಕಮಗಳೂರಲ್ಲಿ ಖಾಲಿದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಕರಣಕ್ಕೂ ಈ ವ್ಯಕ್ತಿಗಳಿಗು ಯಾವ ರೀತಿ ಲಿಂಕ್ ಇದೇ ಅನ್ನೋದು ತನಿಖೆ ನಂತರ ಗೊತ್ತಾಗಲಿದೆ.

ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಪಾತಕಿಗಳು ನಡೆಸಿದ್ದ ಭಾರೀ ಸಂಚನ್ನು ಸಿಸಿಬಿ ವಿಫಲಗೊಳಿಸಿತ್ತು. ಐದು ಶಂಕಿತರನ್ನು ಬಂಧಿಸಿತ್ತು. ಬಂಧಿತರಿಂದ ಸ್ಫೋಟಕ ಪದಾರ್ಥಗಳು, ಫೋನ್ ಸೇರಿ ಹಲವು ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದೆ ಪ್ರಸ್ತುತ ಎನ್‍ಐಎ ವಶದಲ್ಲಿರುವ ಶಂಕಿತರು 2017ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ, ಸೆರೆಮನೆಯಲ್ಲಿಯೇ ಉಗ್ರರ ಸಂಪರ್ಕ ಸಿಕ್ಕಿತ್ತು. ಅವರಿಂದಲೇ ಪ್ರಚೋದನೆ ಹೊಂದಿ ಅವರ ನೆರವಿನಿಂದಲೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ತರಬೇತಿ ಪಡೆಯುತ್ತಿದ್ದರು.

Leave A Reply

Your email address will not be published.

error: Content is protected !!