‘ಆರಕ್ಷಕರ’ ವಸತಿ ಗೃಹಗಳಿಗೆ ಪ್ಲಾಸ್ಟಿಕ್ ಹೊದಿಕೆಯ ‘ರಕ್ಷಣೆ’ ! ಎಲ್ಲಿದು ?

0 47

ರಿಪ್ಪನ್‌ಪೇಟೆ: ಇಲ್ಲಿನ ಪೊಲೀಸ್ ವಸತಿ ನಿಲಯಗಳು ಸಂಪೂರ್ಣ ಶಿಥಿಲಗೊಂಡ ಪರಿಣಾಮದಿಂದಾಗಿ ಮನೆಗಳ ಮೇಲೊಂದು ಪ್ಲಾಸ್ಟಿಕ್ ಹೊಂದಿಕೆ ಅಳವಡಿಸಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಅಶಾಂತಿ, ಕಳ್ಳತನ, ದರೋಡೆ, ಅಪಘಾತ ಹೀಗೆ ಅವಘಡಗಳಿಂದ ಸಾವು-ನೋವುಗಳಾದಲ್ಲಿ ತಕ್ಷಣ ಮನೆ – ಮಠವನ್ನು, ಹೆಂಡತಿ, ಮಕ್ಕಳು, ಸಂಸಾರವನ್ನು ಬಿಟ್ಟು ಹೋಗುವ ನಮ್ಮ ರಕ್ಷಣಾ ಇಲಾಖೆಯವರ ವಸತಿ ನಿಲಯಗಳೇ ಮಳೆಗೆ ಸೋರುವಂತಾಗಿದ್ದು ನಮ್ಮಗಳ ರಕ್ಷಣೆ ಮಾಡುವ ಪೊಲೀಸರ ಮನೆಗಳೇ ಹೀಗಾದರೆ ಅವರ ಕುಟುಂಬದವರ ಗತಿ ಏನು ? ಎಂಬ ಪ್ರಶ್ನೆ ಎಲ್ಲರನ್ನು ಕಾಡುವ ಮೂಲಕ ಜನಪ್ರತಿನಿಧಿಗಳ ಮತ್ತು ಆಧಿಕಾರಿಗಳ ಗಮನಕ್ಕೆ ತರಲಾದರೂ ಕೂಡಾ ನಿರ್ಲಕ್ಷ್ಯ ವಹಿಸಿದಂತೆ ತೋರುತ್ತಿದೆ.

ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲಿ ಸಹ ಮಾಧ್ಯಮಗಳು ಗಮನ ಸೆಳೆಯಲಾಗಿದ್ದರೂ ಪ್ರಯೋಜನವಾಗಲ್ಲಿಲ್ಲ ನಂತರದಲ್ಲಿನ ಸರ್ಕಾರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಗಮನಕ್ಕೆ ತರಲಾದರೂ ಸಮಸ್ಯೆಗೆ ಪರಿಹಾರ ಕಾಣದೇ ಸಮಸ್ಯೆಯಾಗಿಯೇ ಉಳಿಯುವಂತಾಗಿ ಪೊಲೀಸರು ತಮ್ಮ ಮನೆಯ ಮೇಲೆ ಪ್ಲಾಸ್ಟಿಕ್ ಹೊಂದಿಕೆಯ ರಕ್ಷಣೆ ಮಾಡಿಕೊಳ್ಳಬೇಕಾದ ಅನಿರ್ವಾತೆ ಎದುರಾಗಿದೆ.

ಕಾಮಗಾರಿ ಸಂದರ್ಭದಲ್ಲಿಯೇ ಕಟ್ಟಡ ಕಳಪೆಯಾಗಿದೆ ಎಂದು ಮಾಧ್ಯಮಗಳು ಸಮಗ್ರ ವರದಿಯನ್ನು ಪ್ರಕಟಿಸಲಾಗಿದ್ದು ಉದ್ಘಾಟನೆಗೂ ಮುನ್ನವೇ ಕಳಪೆ ಕಾಮಗಾರಿಯನ್ನು ದುರಸ್ಥಿ ಮಾಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಒಟ್ಟಾರೆಯಾಗಿ ‘ಹುಚ್ಚಮುಂ**** ಮದುವೆಯಲ್ಲಿ ಉಂಡವನೇ ಜಾಣ’ ಎಂಬ ಗಾದೆ ಮಾತಿನಂತೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಸರ್ಕಾರದ ಅನುದಾನ ಸದ್ಬಳಕೆ ಮಾಡುವಲ್ಲಿ ಸಂಪೂರ್ಣ ವಿಫಲಗೊಂಡಿರುವುದಕ್ಕೆ ಈ ಕಟ್ಟಡವೇ ಸಾಕ್ಷಿಯಾಗಿದೆ.

ನಿತ್ಯ ಪೊಲೀಸರು ಒತ್ತಡದ ಕರ್ತವ್ಯದಲ್ಲಿದ್ದು ಈಗ ಮಳೆಯಾಗುತ್ತಿರುವ ಕಾರಣ ಮನೆ ತುಂಬ ಸೋರುವಂತಾಗಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುವುದೇ ಕಷ್ಟಕರವಾಗಿದೆ ಒಂದು ಕಡೆ ಕರ್ತವ್ಯದ ಒತ್ತಡ, ಇನ್ನೊಂದು ಕಡೆ ಮನೆ ಸೋರುವಂತಾಗಿ ಕುಟುಂಬದವರು ಹೇಗಿದ್ದಾರೋ ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ. ಹಗಲು ರಾತ್ರಿ ಎನ್ನದೇ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪೊಲೀಸ್ ಸಿಬ್ಬಂದಿಗೆ ಅವರ ರಕ್ಷಣೆ ಮಾಡಿಕೊಳ್ಳುವುದೇ ದುಸ್ಥರವಾಗಿರುವಾಗ ಸರ್ಕಾರ ಇನ್ನಾದರೂ ಇತ್ತ ಗಮನಹರಿಸುವುದರೊಂದಿಗೆ ಪೊಲೀಸ್ ವಸತಿ ನಿಲಯಕ್ಕೆ ಮುಕ್ತಿ ಕಲ್ಪಿಸರೇ ಕಾದುನೋಡಬೇಕಾಗಿದೆ.

ಸ್ವಂತ ಕಟ್ಟಡಗಳಿಂದರೂ ಕೂಡಾ ಹಲವರು ಖಾಸಗಿ ಬಾಡಿಗೆ ಮನೆಗಳಲ್ಲಿ ವಾಸಮಾಡುವ ಸ್ಥಿತಿ ಎದುರಾಗಿದೆ ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಮತ್ತು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಇತ್ತ ಗಮನಹರಿಸಿ ತುರ್ತು ಪರಿಹಾರ ಕಲ್ಪಿಸುವ ಮೂಲಕ ರಕ್ಷಕರ ರಕ್ಷಣೆ ಮಾಡುವರೇ ಕಾದು ನೋಡಬೇಕಿದೆ.

ಗ್ರಾಮದಲ್ಲಿ ಅಶಾಂತಿ ಅಹಿತರಕ ಘಟನೆಗಳ ತಡೆಯುವಂತಹ ಪೊಲೀಸ್ ಮನೆಗಳು ಸಂಪೂರ್ಣ ಶಿಥಿಲಗೊಂಡು ಮಳೆಗೆ ಸೋರುವಂತಾಗಿದ್ದು ಅವರ ಕುಟುಂಬ ವರ್ಗ ಕಣ್ಣೀರಲ್ಲಿ ಕೈತೊಳೆಯವ ಸ್ಥಿತಿ ಎದುರಾಗಿದೆ ಅಂತಹವರ ರಕ್ಷಣೆಗೆ ಸರ್ಕಾರ ತಕ್ಷಣ ಪರಿಹಾರ ಕಲ್ಪಿಸಬೇಕಿದೆ.
– ಆರ್.ಎನ್.ಮಂಜುನಾಥ, ಜನಪರ ಹೋರಾಟ ವೇದಿಕೆ ಅಧ್ಯಕ್ಷ.

Leave A Reply

Your email address will not be published.

error: Content is protected !!