ಮರುವಿನ್ಯಾಸಗೊಳಿಸಿದ ಹವಾಮಾಧಾರಿತ ಬೆಳೆ ವಿಮೆ ; ನೋಂದಣಿಗೆ ಕೊನೆ ದಿನ ಯಾವಾಗ ಗೊತ್ತಾ ?

0 112


ಶಿವಮೊಗ್ಗ : 2023-24 ನೇ ಸಾಲಿಗೆ ಸರ್ಕಾರದ ಆದೇಶದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆ(ಆರ್‍.ಡಬ್ಲ್ಯುಬಿಸಿಐಎಸ್)ಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ.


ಈ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ರೈತರು ಅಡಿಕೆ, ಕಾಳುಮೆಣಸು, ಮಾವು ಮತ್ತು ಶುಂಠಿ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿರುತ್ತದೆ. ರೈತರು ಅಡಿಕೆ, ಕಾಳುಮೆಣಸು, ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮೆಗೆ ನೊಂದಾಯಿಸಲು ದಿ: 31-07-2023 ಅಂತಿಮ ದಿನವಾಗಿರುತ್ತದೆ.


ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್‍ಬುಕ್ ಪ್ರತಿ, ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಬ್ಯಾಂಕ್‍ಗಳಿಗೆ/ ಸಮೀಪದ ಸಾರ್ವಜನಿಕ ಸೇವಾ ಕೇಂದ್ರ(ಕಾಮನ್ ಸರ್ವಿಸ್ ಸೆಂಟರ್)/ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಿ, ರೈತರು ನಿಗದಿತ ಅಂತಿಮ ದಿನಾಂಕದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಅಥವಾ ರೈತ ಸಂಪರ್ಕದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದ್ದು ದೂರವಾಣಿ ಸಂಖ್ಯೆ ಇಂತಿದೆ.

  • ಶಿವಮೊಗ್ಗ 08182-279415/ 9900046087.
  • ಭದ್ರಾವತಿ 08282-295029/ 9108252536.
  • ಶಿಕಾರಿಪುರ – 08187-223544/ 9663634388.
  • ಸೊರಬ 08184-295112/ 9902170900.
  • ಸಾಗರ – 08183-295124/ 8204462308.
  • ತೀರ್ಥಹಳ್ಳಿ – 08181-228151/ 9902687875.
  • ಹೊಸನಗರ – 08185-295364/ 9591695327.
Leave A Reply

Your email address will not be published.

error: Content is protected !!