ಹಿರಿಯ ನಾಗರೀಕರಿಗೆ ಕಾನೂನು ಎಲ್ಲ ರೀತಿಯ ರಕ್ಷಣೆ ಒದಗಿಸಿದೆ ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಿ

0 39

ಚಿಕ್ಕಮಗಳೂರು: ಹಿರಿಯ ನಾಗರೀಕರಿಗೆ ಕಾನೂನು ಎಲ್ಲ ರೀತಿಯ ರಕ್ಷಣೆ ಒದಗಿಸಿದೆ ಅಗತ್ಯ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಆದ ಎ.ಎಸ್.ಸೋಮ ತಿಳಿಸಿದರು.


ಅವರು ನಗರದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರ, ಹಿರಿಯ ನಾಗರೀಕರ ಸಹಾಯವಾಣಿ, ಜೀವಿತಾ ಫೌಂಡೇಶನ್, ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನಾಗರೀಕರ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಹಿರಿಯ ನಾಗರೀಕರು ದೇಶದ ಅಡಿಪಾಯ ಇದ್ದಂತೆ. ಅವರÀ ಹಕ್ಕುಗಳ ರಕ್ಷಣೆಗೆ 2007 ರಲ್ಲೇ ಸುಪ್ರೀಂ ಕೋರ್ಟ್ ಕಾನೂನು ಜಾರಿಗೊಳಿಸಿದೆ. ಆಸ್ತಿಗಾಗಿ ಬಲವಂತ ಪಡಿಸುವಂತಿಲ್ಲ. ಮಕ್ಕಳು ಪ್ರೀತಿಯಿಂದ ಯೋಗಕ್ಷೇಮ ನೋಡಿಕೊಳ್ಳಬೇಕು. ವೃದ್ಧಾಶ್ರಮಗಳಿಗೆ ಸೇರಿಸಬಾರದು. ಹಿರಿಯ ನಾಗರೀಕರು, ಹೆಣ್ಣು ಮಕ್ಕಳನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ ಇಂತಹ ಪ್ರಕರಣಗಳಲ್ಲಿ ಯಾರಿಗಾದರೂ ತೊಂದರೆ ಆದರೆ ಕಾನೂನಿನ ರಕ್ಷಣೆ ಪಡೆಯಬೇಕು ಎಂದು ಸಲಹೆ ಮಾಡಿದರು.


ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎ.ಬಾಲಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಜಿ.ಪೃಥ್ವಿಜಿತ್, ಜೆಸಿಐ ಗ್ರೂಪ್‌ನ ಸಂಸ್ಥಾಪಕ ಅನಿಲ್ ಕುಮಾರ್, ಸರ್ಕಾರಿ ನಿವೃತ್ತ ನೌಕರರ ಸಂಘದ ಖಜಾಂಚಿ ಕೃಷ್ಣಮೂರ್ತಿ, ಕಾರ್ಯದರ್ಶಿ ಶಿವಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಗಲು ಯೋಗಕ್ಷೇಮ ಕೇಂದ್ರದ ನೋಡಲ್ ಅಧಿಕಾರಿಗಳಾದ ಮನೋಜ್, ಮೈತ್ರಿ, ರೂಪ ಉಪಸ್ಥಿತರಿದ್ದರು.


ಹೃದಯರೋಗ ತಜ್ಞರಾದ ಡಾ.ಸಿದ್ಧಾರ್ಥ್ ಮತ್ತು ಸಿಬ್ಬಂದಿ ಹಿರಿಯ ನಾಗರೀಕರಿಗೆ ಉಚಿತ ತಪಾಸಣೆ ನಡೆಸಿ ವೈದ್ಯಕೀಯ ಸಲಹೆಗಳನ್ನು ನೀಡಿದರು. ಗಿರಿಜಾ ದೇಸಾಯಿ ನಿರೂಪಿಸಿ, ಜೀವಿತಾ ಫೌಂಡೇಶನ್ ಕಾರ್ಯದರ್ಶಿ ಕೆ.ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ಯಾಮಲಾ ಬಾಯಿ ವಂದಿಸಿದರು.

Leave A Reply

Your email address will not be published.

error: Content is protected !!