“ವೈ ಬ್ರೇಕ್ ಯೋಗ ಅಟ್ ಆಫೀಸ್ ಚೇರ್” ಯೋಗ ಅಭ್ಯಾಸದ ಕುರಿತು ಪ್ರಾತ್ಯಕ್ಷಿಕೆ

0 132

ಸೊರಬ: ಸರ್ಕಾರಿ ನೌಕರರ ಒತ್ತಡವನ್ನು ನಿವಾರಿಸಲು ಮತ್ತು ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಕೇಂದ್ರ ಸರ್ಕಾರ ವೈ ಬ್ರೇಕ್ ಯೋಗ ಅಟ್ ಆಫೀಸ್ ಚೇರ್ ಎಂಬ ಯೋಗ ಅಭ್ಯಾಸವನ್ನು ಅಳವಡಿಕೊಳ್ಳಲು ಸೂಚನೆ ನೀಡಿದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಮಹೇಶ್ ಮುಕ್ರಿ ಹೇಳಿದರು.

ಶನಿವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯುಷ್ ಇಲಾಖೆಯ ವತಿಯಿಂದ ಕಚೇರಿಯ ಸಿಬ್ಬಂದಿಗೆ ಹಮ್ಮಿಕೊಂಡ “ವೈ ಬ್ರೇಕ್ ಯೋಗ ಅಟ್ ಆಫೀಸ್ ಚೇರ್” ಎಂಬ ಯೋಗ ಅಭ್ಯಾಸದ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ಅವರು ಮಾತನಾಡಿದರು.

ವೃತ್ತಿ ಪರರಿಗೆ ಒತ್ತಡವನ್ನು ನಿವಾರಿಸಲು ಮತ್ತು ಉತ್ಸಾಹವನ್ನು ಹೆಚ್ಚಿಸುವ ಜೊತೆಗೆ ಕೆಲಸದಲ್ಲಿ ಏಕಾಗ್ರತೆ ಸಾಧಿಸಲು ವೈ ಬ್ರೇಕ್ ಯೋಗ ಅನುಕೂಲವಾಗಿದೆ. ಕಚೇರಿಯಲ್ಲಿ ಕೇವಲ ಐದು ನಿಮಿಷದಲ್ಲಿ ಯೋಗಾಭ್ಯಾಸ ಮಾಡಿದರೆ ಸುಮಾರು ಎರಡು ತಾಸು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಸರಳ ಯೋಗದಲ್ಲಿ ಆಸನಗಳು, ಪ್ರಾಣಾಯಾಮ, ಧ್ಯಾನವೂ ಸಹ ಒಳಗೊಂಡಿದೆ. ಅಧಿಕಾರಿಗಳು ತಮ್ಮ ಕಚೇರಿಯ ಕುರ್ಚಿಯಲ್ಲಿಯೇ ಕುಳಿತು ವೈ ಬ್ರೇಕ್ ವರ್ಕ್ ಪ್ಲೇನ್ ಯೋಗ ಎಂಬ ಅಲ್ಪಾವಧಿಯ ಯೋಗವನ್ನು ಅಭ್ಯಾಸ ಮಾಡುವ ಮೂಲಕ ಲಾಭ ಪಡೆಯಬಹುದು ಎಂದರು.

ತಹಶೀಲ್ದಾರ್ ಹುಸೇನ್ ಸರಕಾವಸ್ ಮಾತನಾಡಿ, ಯೋಗ ಪ್ರಾಚೀನ ಪದ್ಧತಿಯಾಗಿದೆ. ಈ ಬಾರಿ ಕೇಂದ್ರ ಸರ್ಕಾರ ವಸುಧೈವ ಕುಟುಂಬ ಎಂಬ ಧ್ಯೇಯದೊಂದಿಗೆ ಜೂ.21ರಂದು ಯೋಗ ದಿನವನ್ನು ಆಚರಿಸುತ್ತಿದೆ. ಇದರ ಪೂರ್ವ ತಯಾರಿಯಾಗಿ ಸರ್ಕಾರಿ ಕಚೇರಿಗಳಲ್ಲಿನ ನೌಕರರಲ್ಲಿ ಒತ್ತಡ ನಿವಾರಣೆಗೆ ವೈ ಬ್ರೇಕ್ ಯೋಗವನ್ನು ಪರಿಚಯ ಮಾಡಿದೆ. ನೌಕರರು ಸರಳವಾಗಿ ಮಾಡಬಹುದಾದ ಆಸನಗಳನ್ನು ಒಳಗೊಂಡಿದ್ದು, ಇದರಿಂದ ಆರೋಗ್ಯಕ್ಕೂ ಅನುಕೂಲವಾಗಲಿದೆ. ನಿತ್ಯ ಯೋಗಾ ಮಾಡುವುದರಿಂದ ಉತ್ತಮ ಆರೋಗ್ಯ ಸಂಪಾದಿಸಬಹುದು ಎಂದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಮುರುಳೀಧರ, ಡಾ. ನದಾಫ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಮಂಜುನಾಥ್, ಶಿರಸ್ತೆದಾರ್ ಜಗದೀಶ್, ತಾಲೂಕು ಕಚೇರಿ ಸಿಬ್ಬಂದಿ ವಿಕ್ರಂ ಹೆಬ್ಬಾರ್, ಭಾಗ್ಯಮ್ಮ, ಬಿ.ಜೆ. ವಿನೋದ್, ಶೃತಿ, ಕೃಷ್ಣಮೂರ್ತಿ, ಎಂ. ಉಮೇಶ್, ಹರ್ಷಾ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!