ಒಂದೇ ಗ್ರಾ.ಪಂ. ಅಧ್ಯಕ್ಷೆ-ಉಪಾಧ್ಯಕ್ಷೆಯಾದ ತಾಯಿ-ಮಗಳು

0 108

ಕಡೂರು : ದೆಹಲಿ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಕಷ್ಟ. ಪಕ್ಷದ ಬ್ಯಾನರ್ ಅಡಿ ಎಂಪಿ-ಎಂಎಲ್‍ಎ ಬೇಕಾದ್ರು ಆಗಬಹುದು. ಆದ್ರೆ ಹಳ್ಳಿ ರಾಜಕೀಯದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆಗೋದು ಕಷ್ಟ. ಅದರಲ್ಲೂ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರಾಗೋದು ಇನ್ನೂ ಕಷ್ಟ.

ಹೀಗಿರುವಾಗ ಅಮ್ಮ-ಮಗಳು ಒಂದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದ್ರೆ ಹೇಗಿರುತ್ತೆ ಅಲ್ವಾ? ಅಂತಹಾ ಒಂದು ಅಪರೂಪದ ಸನ್ನಿವೇಶಕ್ಕೆ ಕಾಫಿನಾಡು ಚಿಕ್ಕಮಗಳೂರು ಸಾಕ್ಷಿಯಾಗಿದೆ. 20 ವರ್ಷದ ಸ್ನೇಹ ಹಾಗೂ ಅವರ ತಾಯಿ ನೇತ್ರಾವತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಮತ್ತು ಉಪಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಸ್ನೇಹಾ ಮತ್ತು ನೇತ್ರಾವತಿ ಕಡೂರು ತಾಲೂಕಿನ ಗರ್ಜೆ ಗ್ರಾಮದವರು. ಗರ್ಜೆ ಗ್ರಾಮ ಪಂಚಾಯಿತಿಗೆ ಸ್ನೇಹ ಅಧ್ಯಕ್ಷೆ, ಆಕೆ ತಾಯಿ ನೇತ್ರಾವತಿ ಉಪಾಧ್ಯಕ್ಷೆ. ಗರ್ಜೆ-ಜಿ.ಮಾದಾಪುರ ಎರಡು ಗ್ರಾಮ ಸೇರಿ ಒಂದು ಪಂಚಾಯಿತಿ. ಒಟ್ಟು ಏಳು ಜನ ಸದಸ್ಯರು.

ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ

ಕಳೆದ ಅವಧಿಗೆ ಬೇರೆಯವರು ಅಧ್ಯಕ್ಷರು-ಉಪಾಧ್ಯಕ್ಷರಾಗಿದ್ದರು. ಈ ಬಾರಿ ಅಧ್ಯಕ್ಷೆ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿತ್ತು. ಉಪಾಧ್ಯಕ್ಷೆ ಸ್ಥಾನ ಬಿಸಿಎಂ ಮಹಿಳೆಗೆ ಬಂದಿತ್ತು. ಏಳು ಜನ ಸದಸ್ಯರಲ್ಲಿ ಕೆಲ ವಿರೋಧ ಇದ್ದೇ ಇರುತ್ತೆ. ಇಲ್ಲು ಇತ್ತು. ಏಳರಲ್ಲಿ 3 ಜನರ ಗುಂಪು ಒಂದು. 4 ಜನರ ಗುಂಪು ಮತ್ತೊಂದು. ಆ ವಿರೋಧದ ಮಧ್ಯೆಯೂ ತಾಯಿ-ಮಗಳಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿದೆ

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಸಿಕ್ಕಿರೋದರಿಂದ ತಾಯಿ-ಮಗಳು ಇಬ್ಬರು ಖುಷಿಯಾಗಿದ್ದಾರೆ. ನಾವು ಗೆಲ್ತೀವಿ ಅನ್ನೋದೇ ಕನಸಾಗಿತ್ತು. ಅದೃಷ್ಟದಿಂದ ಗೆದ್ದಿದ್ದೇವೆ. ಆದ್ರೆ, ಅಧ್ಯಕ್ಷರು-ಉಪಾಧ್ಯಕ್ಷರು ಆಗ್ತೀವಿ ಅಂತ ಕನಸಲ್ಲೂ ಕಂಡಿರಲಿಲ್ಲ. ಈಗ ಆಗಿದ್ದೇವೆ. ಜನr ನಂಬಿಕೆ ಉಳಿಸಿಕೊಂಡು ಒಳ್ಳೆ ಕೆಲಸ ಮಾಡಬೇಕು ಎಂದು ನೇತ್ರಾವತಿ ಹೇಳುತ್ತಾರೆ.

ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಸ್ನೇಹಾ

ಪದವೀಧರೆ ಆಗಿರುವ ಸ್ನೇಹಾ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ್ದರು. ಜಿ.ಮಾದಾಪುರ ಹಾಗೂ ಗರ್ಜೆ ಎರಡೂ ಗ್ರಾಮದಲ್ಲೂ ನೇತ್ರಾವತಿ ಅವರನ್ನು ನಿಲ್ಲಿಸೋಕೆ ಬಂಬೆಲಿಗರು ತೀರ್ಮಾನಿಸಿದ್ದರು.

ಕೊನೆ ಕ್ಷಣದಲ್ಲಿ ನಾಮಪತ್ರ ಸಲ್ಲಿಕೆ

ಎರಡೂ ಕಡೆ ಗೆದ್ರೆ ಮತ್ತೆ ಉಪಚುನಾವಣೆ ನಡೆಯುತ್ತೆ ಎಂದು ನಾಮಪತ್ರ ಸಲ್ಲಿಕೆಯ ಕಡೇ ದಿನದ ಕೊನೆ ಐದು ನಿಮಿಷದಲ್ಲಿ ಆಮೇಲೆ ನೋಡೋಣ ಎಂದು ಸ್ನೇಹ ತಂದೆ ಸ್ನೇಹಿತರು ಸ್ನೇಹಾಳ ಹೆಸರು ಸೇರಿಸಿ ನಾಮಪತ್ರ ಸಲ್ಲಿಸಿದ್ದರು. ಅಮ್ಮ-ಮಗಳು ಇಬ್ಬರು ಗೆದ್ದಿದ್ದಾರೆ.

ಗೆದ್ದಿದ್ದೇ ಪುಣ್ಯ ಎಂದುಕೊಂಡಿದ್ದ ಅಮ್ಮ-ಮಗಳು ಇಂದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿರೋದನ್ನ ನೆನೆದು ಇಬ್ಬರೂ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ್ದು, ಊರಿನ ಜನ ಹಾಗೂ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಒಳ್ಳೆ ಕೆಲಸ ಮಾಡಬೇಕೆಂದು ಕನಸು ಕಟ್ಟಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!