ಸಾಗರದ ಜನಾನುರಾಗಿ ವೈದ್ಯ ಡಾ. ಪರಪ್ಪ ನಿವೃತ್ತಿ: ಸಹೃದಯಿ ಸೇವೆಗೆ ಆತ್ಮೀಯ ಬೀಳ್ಕೊಡುಗೆ

Written by Koushik G K

Published on:

ಸಾಗರ: ಯಾವ ಸಮಯವಲ್ಲಾದರೂ ಕರೆ ಮಾಡಿದರೆ ತಕ್ಷಣ ಸ್ಪಂದಿಸಿ ಚಿಕಿತ್ಸೆ ನೀಡುವ ಜನಾನುರಾಗಿ ವೈದ್ಯ ಡಾ. ಪರಪ್ಪ.ಕೆ ಅವರು ಇಂದು ವಯೋನಿವೃತ್ತಿ ಹೊಂದಿದ್ದಾರೆ. ಸಾಗರ ನಗರದ ಉಪ ವಿಭಾಗೀಯ ಆಸ್ಪತ್ರೆಯ ಸಿವಿಲ್ ಸರ್ಜನ್ ಆಗಿ ಸೇವೆ ಸಲ್ಲಿಸಿದ್ದ ಈ ಸಹೃದಯಿ ವೈದ್ಯರ ಸೇವೆ ಜತೆಗೆ ಅವರ ಜನಪ್ರೀಯತೆಯೂ ಗೌರವಿಸಲ್ಪಟ್ಟಿತು.

WhatsApp Group Join Now
Telegram Group Join Now
Instagram Group Join Now

ಇಂದಿನ ನಿವೃತ್ತಿ ಹಿನ್ನೆಲೆಯಲ್ಲಿ, ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಮತ್ತು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಡಾ. ಪರಪ್ಪ ಅವರಿಗೆ ಆತ್ಮೀಯ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.

“ಸರ್ಕಾರಿ ಸೇವೆ = ಸಾಮಾಜಿಕ ಸೇವೆ” – ಡಾ. ಪರಪ್ಪ.ಕೆ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ. ಪರಪ್ಪ, “ಆರೋಗ್ಯ ಇಲಾಖೆಯಲ್ಲಿ ಸೇವೆ ನೀಡುವುದು ನಿಜಕ್ಕೂ ಸವಾಲಿನ ಕೆಲಸ. ಆಸ್ಪತ್ರೆಯ ವೈದ್ಯಸಿಬ್ಬಂದಿಯ ಜೊತೆಗೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಮಾತ್ರವಲ್ಲದೇ, ಹಣದ ಹಿಂದೆ ಓಡಿದರೆ ನೆಮ್ಮದಿಯ ಜೀವನ ಸಿಗದು. ಸರ್ಕಾರಿ ವೈದ್ಯರೆಂಬ ಕಾರಣಕ್ಕೆ ಸಮಾಜದತ್ತ ನಮ್ಮ ಹೊಣೆ ಇನ್ನಷ್ಟು ಹೆಚ್ಚು,” ಎಂದು ಸ್ಪಷ್ಟಪಡಿಸಿದರು.

“ನಾನು ನನ್ನ ಅವಧಿಯಲ್ಲಿ ಸಿವಿಲ್ ಸರ್ಜನ್ ಆಗಿ ಸೇವೆ ಸಲ್ಲಿಸಿರುವುದರಲ್ಲಿ ತೃಪ್ತಿ ಇದೆ,” ಎಂದ ಅವರು, ಸೇವೆಯುದ್ದಕ್ಕೂ ಸಾರ್ವಜನಿಕರ ವಿಶ್ವಾಸ ಗೆದ್ದಿರುವುದು ನನ್ನ ಗೆಲುವು ಎಂದರು.

“ಅನುಕರಣೀಯ ಸೇವೆ – ಮಾರ್ಗದರ್ಶಕ ವ್ಯಕ್ತಿತ್ವ” – ಡಾ. ವಿಕ್ರಮ್

ಡಾ. ವಿಕ್ರಮ್ ಅವರು ಮಾತನಾಡುತ್ತಾ, “ನಾನು ಉಪವಿಭಾಗೀಯ ಆಸ್ಪತ್ರೆಗೆ ಬಂದಾಗ, ಸೇವೆಯ ನಿಜವಾದ ಅರ್ಥ ಕಲಿಸಿಕೊಟ್ಟವರು ಡಾ. ಪರಪ್ಪ. ಅವರ ಕೆಲಸ ನಿಜಕ್ಕೂ ಅನುಕರಣೀಯ. ಅವರು ವೈದ್ಯರಾಗಿ ಮಾತ್ರವಲ್ಲ, ಆಡಳಿತಾಧಿಕಾರಿಯಾಗಿ ಕೂಡ ಅತಿ ಶ್ರೇಷ್ಠವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇಂದು ಅವರು ನಿವೃತ್ತರಾದರೂ ಆಸ್ಪತ್ರೆಯೊಂದಿಗೆ ಅವರ ಬಾಂಧವ್ಯ ಎಂದಿಗೂ ಮರೆಯಲಾಗದು,” ಎಂದರು.

Read More :ಹೈಕೋರ್ಟ್‌ನಿಂದ ಆರ್.ಎಂ. ಮಂಜುನಾಥ್ ಗೌಡಗೆ ಜಾಮೀನು ಮಂಜೂರು

Leave a Comment