ಸಾಗರ : 16 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅನುಮತಿ

Written by Koushik G K

Updated on:

ಸಾಗರ :ತಾಲ್ಲೂಕಿನ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಅಧಿಕೃತ ಅನುಮತಿ ನೀಡಿದೆ.

WhatsApp Group Join Now
Telegram Group Join Now
Instagram Group Join Now

ಸಿಗಂದೂರು ಹೇಳಿಕೆ : ಮಧು ಬಂಗಾರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಚಿವ ಹರತಾಳು ಹಾಲಪ್ಪ

ಈ ಮಹತ್ವದ ಮುಂದಾಳಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ವಿಶಿಷ್ಟ ಪ್ರಯತ್ನದ ಫಲವಾಗಿದ್ದು, ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ಅನುಕೂಲ ದೊರೆಯಲಿದೆ.

ಈ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳು ದ್ವಿಭಾಷಾ ಮಾದರಿಯಲ್ಲಿ ನಡೆಯಲಿದ್ದು, ಸ್ಥಳೀಯವಾಗಿ ಲಭ್ಯವಿರುವ ಶಿಕ್ಷಕರನ್ನು ಬಳಸಿಕೊಂಡು ಶಿಕ್ಷಣ ನೀಡಲಾಗುತ್ತದೆ.


📍 ಇಂಗ್ಲಿಷ್ ತರಗತಿಗೆ ಅನುಮತಿ ಪಡೆದ 16 ಶಾಲೆಗಳ ಪಟ್ಟಿ:

  1. ನಾಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  2. ಬರದವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
  3. ಮಾಸೂರಿನ GHS ಶಾಲೆ
  4. ಮಾಲ್ವೆಯ GHPS ಶಾಲೆ
  5. ಬಿಳಿಸಿರಿ GHPS ಶಾಲೆ
  6. ಹೆಬ್ಬರಿಗೆ GHPS ಶಾಲೆ
  7. ನರಸೀಪುರ GLPS ಶಾಲೆ
  8. ಆನಂದಪುರ GLPS ಶಾಲೆ
  9. ಯಡೆಹಳ್ಳಿ GHPS ಶಾಲೆ
  10. ಗೆಣಸಿನಕುಣಿ GHPS ಶಾಲೆ
  11. ರಾಮನಗರ – ಯಳಗಳಲೆ GHPS ಶಾಲೆ
  12. ಟ್ಯಾಂಕ್ ಸಾಗರ್ GHPS ಶಾಲೆ
  13. ಸಣ್ಣಮನೆ ಎಕ್ಸ್‌ಟೆನ್ಷನ್ ಸಾಗರ GHPS ಶಾಲೆ
  14. GGHPS ಉರ್ದು ಗಾಂಧಿನಗರ ಶಾಲೆ
  15. GGHPS ಉರ್ದು ಅರಳಿಕಟ್ಟೆ ಸಾಗರ
  16. ಸರ್ಕಾರಿ ಶ್ರೀ ಸಿದ್ದೇಶ್ವರ HPS ಸಾಗರ ಶಾಲೆ

ಇದು ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಮಹತ್ವದ ಹೆಜ್ಜೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗೂ ಇಂಗ್ಲಿಷ್‌ ಜ್ಞಾನವನ್ನೂ ಸಮಾಜದ ಹತೋಟಿಗೆ ತರಲು ಸರ್ಕಾರದ ಈ ಕ್ರಮ ಸಾಮಾಜಿಕ ವಲಯದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ.

english medium school in sagara

Leave a Comment