ದೇವರಸಲಿಕೆಯಲ್ಲಿ ಏಕಪವಿತ್ರ ನಾಗಮಂಡಲೋತ್ಸವಕ್ಕೆ ಭರದ ಸಿದ್ಧತೆ

ರಿಪ್ಪನ್‌ಪೇಟೆ: ದೇವರಸಲಿಕೆ ಗ್ರಾಮದ ಶ್ರೀಈಶ್ವರ ದೇವಸ್ಥಾನ ಸಮಿತಿಯರು ಫೆಬ್ರವರಿ 11 ಮತ್ತು 12 ರಂದು ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಪೂರ್ವ ಸಿದ್ದತಾ ಕಾರ್ಯಕ್ರಮದ ಭರದಿಂದ ಸಾಗಿದೆ.

ದೇವರಸಲಿಕೆ ಕುಟುಂಬದವರ ಮೂಲ ನಾಗಬನ ಕೇಶವಗೌಡರ ಮನೆ ಹತ್ತಿರದಲ್ಲಿ ಮುಂಬಾರು ಗ್ರಾಮಸ್ಥರು ಸಹಯೋಗದಲ್ಲಿ ಆಯೋಜಿಸಲಾಗಿರುವ ಏಕಪವಿತ್ರ ನಾಗಮಂಡಲೋತ್ಸವ ಫೆಬ್ರವರಿ 11 ರಂದು ಶಂಕರನಾರಾಯಣದ ಪುರೋಹಿತರಾದ ಶ್ರೀ ಸೂರ್ಯನಾರಾಯಣ ಬಾಯರು ಮತ್ತು ಬಳಗ ಹಾಲಾಡಿ ವೆಂಕಟೇಶ ಹಂಜಾರರು, ಅಂಪಾರು ಸರ್ವೋತ್ತಮ ವೈದ್ಯರು, ಪಾಕಶಾಸ್ತ್ರಜ್ಞರಾದ ಶಂಕರನಾರಾಯಣ ವಾದ್ಯ ವೃಂದ ಉಮೇಶ ದೇವಾಡಿಗ ಮತ್ತು ಬಳಗ ಸೌಡ ಇವರ ನೇತೃತ್ವದಲ್ಲಿ ಫೆಬ್ರವರಿ 11 ರಂದು ಬೆಳಗ್ಗೆ 9 ಗಂಟೆಗೆ ಪಂಚಗವ್ಯ, ಶುದ್ದ ಪುಣ್ಯಾಹ ಸರ್ಪಸಂಸ್ಕಾರ ಅಂತ್ಯ ನವಗ್ರಹ ಯಾಗ ಬಿಂಬ ಶುದ್ದಿ ಅಧಿವಾಸ ಹೋಮ ನಾಗಶಿಲೆ ಪ್ರತಿಷ್ಠಾಪನೆ ಕಲಶಾಭಿಷೇಕ ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಸಂಜೆ 6 ಗಂಟೆಯಿಂದ ಆಶ್ಲೇಷ ಬಲಿ ಮಂಡಲ ಮಂಟಪ ವಾಸ್ತು ಪೂಜಾ ಬಲಿ ಅಸ್ತ್ರಹೋಮ ಪ್ರಾಕಾರ ಬಲಿ 12 ರಂದು ಬೆಳಗ್ಗೆ 9 ರಿಂದ ಗಣೇಶ ಪೂಜಾ ಪುಣ್ಯಾಹ ಮಧುಪರ್ಕ ಪೂಜೆ ಪಂಪವಿಂಶತಿ ಕಲಶ ಸ್ಥಾಪನೆ ಅಯುತ ಸಂಖ್ಯಾತಿಲ ಹೋಮ ಪ್ರಾಯಶ್ಚಿತ ಪವಮಾನ ಹೋಮ ತತ್ವ ಹೋಮ ಪ್ರಧಾನ ಹೋಮ, ಉದ್ಯಾಪನಾ ಹೋಮ ವೇದ ಪಾರಾಯಣ ಗಾಯಿತ್ರಿ ಜಪ ಮೂಲಮಂತ್ರ ಜಪ ಕಲಶಾಭೀಷೇಕ ಮಹಾಪೂಜೆ ವಟು ಬ್ರಾಹ್ಮಣ ಸುಹಾಸನಿ ಕನ್ನಿಕಾ ಪೂಜಾ ದಂಪತಿ ಪೂಜಾ ಅಚಾರ್ಯ ಪೂಜಾ ರಾತ್ರಿ 8 ಗಂಟೆಗೆ ಮಂಡಲಪೂಜೆ ಮಂಡಲೋತ್ಸವ ಪ್ರಸಾದ ವಿತರಣೆ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆನಂದಪುರ ಮುರುಘಾಮಠ, ರಾಮಚಂದ್ರಪುರ ಮಠ ಹೊಂಬುಜ ಜೈನ ಮಠ, ಮಳಲಿಮಠ, ಕೋಣಂದೂರು, ಮೂಲೆಗದ್ದೆ ಕವಲೇದುರ್ಗ, ನಿಟ್ಟೂರು ಹಾಗೂ ಸಿಗಂದೂರು ದೇವಸ್ಥಾನದ ಧರ್ಮದರ್ಶಿಗಳು ಹೀಗೆ ಹಲವು ಮಠಗಳ ಪೂಜ್ಯರು ನಾಡಿನ ರಾಜಕೀಯ ಮುಖಂಡರು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು ಎಂದು ದೇವರಸಲಿಕೆ ಕುಟುಂಬದವರ ಮೂಲ ನಾಗಬನ ಕೇಶವಗೌಡರು ಮಾಧ್ಯಮಪ್ರತಿನಿಧಿಗಳಿಗೆ ವಿವರಿಸಿದರು.

ರಿಪ್ಪನ್‌ಪೇಟೆಯಲ್ಲಿ ಶರಣರು ಕಂಡ ಶಿವ ಪ್ರವಚನ :
ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಭಾ ಭವನದಲ್ಲಿ ಫೆಬ್ರವರಿ 8 ರಿಂದ 28 ರವರೆಗೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯವರೆಗೆ ಮಹಾಶಿವರಾತ್ರಿಯ ಅಂಗವಾಗಿ ಮಹಾನ್ ತಪಸ್ವಿ ಬಾಲ ಬ್ರಹ್ಮಚಾರಿಗಳು ಡಾ.ಬಿ.ಕೆ.ಬಸವರಾಜ ರಾಜಋಷಿಗಳು ಇವರಿಂದ “ಶರಣರು ಕಂಡ ಶಿವ’’ ಪ್ರವಚನ ಮಾಲೆ ಜರುಗಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!