Karnataka Rain

Karnataka Rain :ಈ ಜಿಲ್ಲೆಗಳಲ್ಲಿ ಜೂನ್ 26ರವರೆಗೂ ಭಾರಿ ಮಳೆ !

Karnataka Rain:ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಸ್ವಲ್ಪ ಪ್ರಮಾಣದಲ್ಲಿ ಪುನಶ್ಚೇತನಗೊಂಡಿದ್ದರೂ, ಇದೀಗ ಮತ್ತೆ ಒಣಹವೆಯ ಪ್ರಾಬಲ್ಯ ಕಾಣಿಸುತ್ತಿದೆ. ಮುಂಗಾರು ಆರಂಭವಾದ ನಂತರ ಮಳೆಯ ಪ್ರಮಾಣ ಕುಂದಿದ್ದು, ಮುಂಗಾರುಪೂರ್ವದ ಮಳೆಯೇ ಹೆಚ್ಚು ಅಬ್ಬರ ತೋರಿದೆ.

WhatsApp Group Join Now
Telegram Group Join Now
Instagram Group Join Now

ಇತ್ತೀಚಿನ ಎರಡು ದಿನಗಳಿಂದ ಮಾತ್ರ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಆದರೆ ಉಳಿದ ಎಲ್ಲಾ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಒಣಹವೆಯ ಸ್ಥಿತಿಯೇ ಮುಂದುವರಿಯುತ್ತಿದೆ.

ಯಾವ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ?

ಹವಾಮಾನ ಇಲಾಖೆ ಮಾಹಿತಿ ಪ್ರಕಾರ:

ಮಳೆ ಮುಂದುವರಿಯುವ ಜಿಲ್ಲೆಗಳು (ಜೂನ್ 26ರವರೆಗೆ):

  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಉಡುಪಿ
  • ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾಧಾರಣ ಮಳೆಯು ಸಂಭವಿಸಬಹುದಾದ ಜಿಲ್ಲೆಗಳು:

  • ಬಾಗಲಕೋಟೆ
  • ಬೆಳಗಾವಿ
  • ಬೀದರ್
  • ಧಾರವಾಡ
  • ಕಲಬುರಗಿ
  • ರಾಯಚೂರು
  • ವಿಜಯಪುರ
  • ಯಾದಗಿರಿ
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಚಾಮರಾಜನಗರ
  • ಚಿಕ್ಕಮಗಳೂರು
  • ಹಾಸನ
  • ಕೊಡಗು
  • ಮೈಸೂರು
  • ಶಿವಮೊಗ್ಗ

ಒಣಹವೆ ಮುಂದುವರಿಯುವ ಜಿಲ್ಲೆಗಳು:

  • ವಿಜಯನಗರ
  • ತುಮಕೂರು
  • ರಾಮನಗರ
  • ಮಂಡ್ಯ
  • ಕೋಲಾರ
  • ದಾವಣಗೆರೆ
  • ಚಿತ್ರದುರ್ಗ
  • ಚಿಕ್ಕಬಳ್ಳಾಪುರ
  • ಬಳ್ಳಾರಿ

ಮಳೆ ಕಾಣಿಸಿಕೊಳ್ಳುವ ಪ್ರಮುಖ ಪ್ರದೇಶಗಳು:

ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ ಇತ್ಯಾದಿ ಪ್ರದೇಶಗಳಲ್ಲಿ ಮಳೆಯ ಸೂಚನೆ ಇದೆ.

Read More :ಎಚ್ಚರ! ನಿಮ್ಮ ಜಮೀನಿಗೆ ಬೇರೆ ಯಾರೋ ಸಾಲ ತೆಗೆದಿರಬಹುದಾ? ಇಲ್ಲಿದೆ ಪರಿಶೀಲನೆಗೆ ಸರಳ ಮಾರ್ಗ!

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

error: Content is protected !!