ಕಿಮ್ಮನೆ ರತ್ನಾಕರ್ ಹುಟ್ಟುಹಬ್ಬದ ಅಂಗವಾಗಿ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

Written by Koushik G K

Published on:

ತೀರ್ಥಹಳ್ಳಿ:ಹಿರಿಯ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ಜನ್ಮದಿನದ ಅಂಗವಾಗಿ ಗುರುವಾರದಂದು ಪಟ್ಟಣದ ಪ್ರಸಿದ್ಧ ಶ್ರೀ ರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್, ಪ.ಪಂ. ಸದಸ್ಯರು, ಯುವ ಕಾಂಗ್ರೆಸ್ ಪದಾಧಿಕಾರಿಗಳು, ಪಕ್ಷದ ಮುಖಂಡರು ಮತ್ತು ನಿಷ್ಠಾವಂತರಾದ ಕಾರ್ಯಕರ್ತರು ಪಾಲ್ಗೊಂಡು ಪೂಜೆಗಾಗಿ ಉಪಸ್ಥಿತರಿದ್ದರು.

ಪೂಜಾ ಸಮಾರಂಭವನ್ನು ಶ್ರದ್ಧಾಪೂರ್ವಕವಾಗಿ ಆಯೋಜಿಸಿದ ಕಾರ್ಯಕರ್ತರು, “ಕಿಮ್ಮನೆ ರತ್ನಾಕರ್ ಅವರು ನಮ್ಮ ನಾಯಕರು. ಅವರ ಆಯುಷ್ಯ-ಆರೋಗ್ಯಕ್ಕಾಗಿ ನಾವು ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ” ಎಂದು ಅಭಿಪ್ರಾಯಪಟ್ಟರು.

Read More:ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ₹8644 ಕೋಟಿ ಬಿಡುಗಡೆ – ಬೇಳೂರು ಗೋಪಾಲಕೃಷ್ಣ

Leave a Comment