ತೀರ್ಥಹಳ್ಳಿ: ಪತ್ರಿಕಾ ಧರ್ಮ ಸುದ್ದಿಗಾಗಿ ಅಥವಾ ಟಿಆರ್‌ಪಿಯ ಜನಪ್ರಿಯತೆಯ ಹಿಂದ ಓಡುತ್ತಿದೆ. ರಾಶಿ ಭವಿಷ್ಯ, ವಶೀಕರಣ, ಶತ್ರುನಾಶ, ಕನ್ಯಾಬಲದ ಕುರಿತು ಮಾಹಿತಿ ನೀಡಬಹುದಾದ ಮಾಧ್ಯಮಗಳು ಸಂವಿಧಾನದ ವಿಚಾರ ಪ್ರಚಾರ ಯಾವುದೇ ಸುದ್ದಿಯ ಅಳವಡಿಸಿಕೊಂಡಿಲ್ಲ ಎಂದು ಕೋಣಂದೂರು ಪ್ರಥಮ ದರ್ಜೆ ಕಾಲೇಜಿನ ಮಾನವ ಕುಲಶಾಸ್ತ್ರಜ್ಞ ಪಿ.ಆರಡಿ ಮಲ್ಲಯ್ಯ ಕಣ್ಣೀರ ಹೇಳಿದರು.
ಪಟ್ಟಣದ ಮಾಧವ ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಂವಿಧಾನದ ಪಡಿಸಲು ಕಾರ್ನರ್ ಯಾರಿಗೆಲ್ಲಾ ಅಗತ್ಯ ಇದೆ ಎಂದು ಪ್ರಶ್ನಿಸಿದರೆ ಮಾದ್ಯಮವನ್ನು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ತಪ್ಪಾಗಿ ಗ್ರಹಿಕೆ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣದ ಆರ್ಭಟದಲ್ಲಿ ಮುದ್ರಣ ಮಾದ್ಯಮಗಳು ದೊಡ್ಡ ಸುಳಿಗೆ ಸಿಲುಕಿವೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ತಪ್ಪುಗಳನ್ನು ಪ್ರಾಮಾಣಿಕವಾಗಿ ಜನರ ಮುಂದಿಡುವ ಮತ್ತೊಂದು ಅಂಗವಾಗಿ ಮಾದ್ಯಮರಂಗ ಗುರುತಿಸಿಕೊಂಡಿದೆ. ಧೈರ್ಯವಾಗಿ ಪ್ರಭುತ್ವದ ವಿರುದ್ಧ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಾಕ್ಷರತೆ ಪ್ರಮಾಣ ಹೆಚ್ಚಾದಂತೆ ಅಪರಾಧ ಚಟುವಟಿಕೆ ಪ್ರಮಾಣವು ಅಧಿಕವಾಗುತ್ತಿದೆ. ಕ್ರೌರ್ಯದ ಬಗ್ಗೆ ದೃಶ್ಯ ಮಾದ್ಯಮಗಳು ತೋರಿಸುವ ರೀತಿ ಭಯ ಮೂಡಿಸುವಂತಿದೆ. ಬಾರ್ ಕೌನ್ಸಿಲ್, ಮೆಡಿಕಲ್ ಅಸೋಸಿಯೇಷನ್ ಮುಂತಾದ ಸಂಸ್ಥೆಗಳ ರಾಜಕೀಯಗಳು ನೋಡಿದರೆ ಇಂತಹ ಸ್ಥಿತಿಯಲ್ಲಿ ಭಾರತ ಇದೆಯೇ ಅನುಮಾನ ఎంబ ಸೃಷ್ಟಿಯಾಗುತ್ತದೆ.
ಪದವೀಧರರ ಕ್ಷೇತ್ರದಲ್ಲಿ ಮತ ಹಾಕುವವರು ವಿದ್ಯಾವಂತರೇ ಆಗಿದ್ದರು ಅಲ್ಲಿಯೂ ಸಾಮಾಜಿಕ ನ್ಯಾಯವನ್ನು ನೋಡಲು ಸಾಧ್ಯವಿಲ್ಲ. ಜಾತಿ. ಧರ್ಮದ ದೇಶದೊಳಗೆ ಕಟ್ಟಿಬಿದ್ದಿದ್ದೇವೆ. ಮಾನಹಾನಿ ಪ್ರಕರಣಗಳು ಸಾಮಾನ್ಯವಾಗುತ್ತಿರುವ ಕಾಲಘಟ್ಟದಲ್ಲಿ ದಾಖಲೆ ಸಮೇತ ತಪ್ಪುಗಳನ್ನು ಪ್ರಚಾರ ಪಡಿಸುವ ಪತ್ರಿಕೆಗಳ ಕಾರ್ಯ ಶ್ಲಾಘನೀಯ, ಒಕ್ಕೂಟ ವ್ಯವಸ್ಥೆಯೊಳಗೆ ಭಾರತ ಇದ್ದು ಇಲ್ಲಿನ ಎಲ್ಲಾ ಭಾಷೆಗಳಿಗೂ ತನ್ನದೇ ಆದ ಮಾನ್ಯತೆಗಳಿವೆ. ಹೇರಿಕೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಸನ್ನಿವೇಶ ಎಂದು ಅಭಿಪ್ರಾಯಿಸಿದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದರೆ ಪತ್ರಕರ್ತರು ಒಂದು ವಿಚಾರದ ಬಗ್ಗೆ ಮಾತನಾಡದಂತೆ ಪೂರ್ವ ನಿರ್ಬಂಧ ಹೇರುತ್ತಿರುವ ಪ್ರಸಂಗಗಳು ಕರ್ನಾಟಕದಲ್ಲೇ ನಡೆಯುತ್ತಿದೆ. ಇದನ್ನು ಗ್ಯಾಗ್ ಎಂದು ಕರೆಯಲಾಗುತ್ತದೆ. ಡಿಕ್ಷನರಿಯಲ್ಲಿ ಅದಕ್ಕೆ ತಮಾಶೆಯ ಆದೇಶವೆಂದು ತೋರಿಸುತ್ತಿದು ನಿಜವಾಗಿಯೂ 900 ಪತ್ರಕರ್ತರ ಮೇಲೆ ಪೂರ್ವ ನಿರ್ಭಂದ ಹೇರುವುದು ಕೂಡ ತಮಾಶೆಯಾಗಿದೆ. ಇದನ್ನು ನ್ಯಾಯಾಲಯ ಕೂಡ ಅಂಗೀಕರಿಸುತ್ತಿದೆ. 8800 ಸುದ್ದಿ, ಸ್ಟೋರಿಗಳನ್ನು ಡಿಲೀಟ್ ಮಾಡಲು ಹೇಳಿರುವ ನ್ಯಾಯಾಲಯಕ್ಕೆ ಇಂತಹ ಪ್ರಕರಣದ ಹಿಂದೆ ದೋಷ ಇದೆ ಅನ್ನಿಸುತ್ತಿಲ್ಲ..! ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯ ದ ವೈರುಧ್ಯ. ದೇಶದಲ್ಲಿರುವ ಶೇ.40 ರಷ್ಟು ಪತ್ರಕರ್ತರು ಜಾಮೀನಿನಲ್ಲಿದ್ದಾರೆ. ಇಷ್ಟಿದ್ದರು ಕೂಡ ಪತ್ರಕರ್ತರನ್ನು ರಕ್ಷಿಸಬೇಕಾದ ಮಾತ್ರ ಮೌನವಾಗಿದೆ ಎಂದು ಬೇಸರಿಸಿದರು.
ಪತ್ರಕರ್ತರ ತೀರ್ಥಹಳ್ಳಿ ಘಟಕದ ಅಧ್ಯಕ್ಷ ಮುನ್ನೂರು ಮೋಹನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಮುರುಗರಾಜ್ ಕೋಣಂದೂರು ಸ್ವಾಗತಿಸಿದರು. ಸಂತೋಷ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.