ಶಿವಮೊಗ್ಗ : ಸಕ್ರೆಬೈಲು ಆನೆ ಶಿಬಿರಕ್ಕೆ ಪಿಸಿಸಿಎಫ್ ಭೇಟಿ !

Written by Koushik G K

Published on:

ಶಿವಮೊಗ್ಗ –ಸಕ್ರೆಬೈಲು ಆನೆ ಶಿಬಿರದಲ್ಲಿ ಆನೆಗಳ ಆರೈಕೆಯ ಕೊರತೆ, ರೋಗ ಪೀಡಿತ ಸ್ಥಿತಿ ಮತ್ತು ನಿರ್ಲಕ್ಷ್ಯದಿಂದ ಹಲವು ಆನೆಗಳ ಸಾವು ಸಂಭವಿಸಿದೆ ಎಂಬ ಆರೋಪಗಳ ಬೆನ್ನಲ್ಲೇ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (PCCF) ನಿನ್ನೆ ಶಿಬಿರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇತ್ತೀಚೆಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆ ಹಿಡಿದ “ವಿಕ್ರಾಂತ” ಎಂಬ ಕಾಡಾನೆ ಸಕ್ರೆಬೈಲಿಗೆ ತರಲಾಗಿದ್ದು, ಅವನ ಆರೋಗ್ಯ ಗಂಭೀರವಾಗಿರುವುದರಿಂದ ಸ್ಥಳೀಯರು ಮತ್ತು ಪ್ರಾಣಿ ಹಿತಾಸಕ್ತಿ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ವಿಕ್ರಾಂತನ ಸ್ಥಿತಿ:

ಸಕಲೇಶಪುರದ ಕಾಡಿನಲ್ಲಿ ಬಲಿಷ್ಠನಾಗಿದ್ದ ವಿಕ್ರಾಂತ, ಈಗ ಸಕ್ರೆಬೈಲು ಶಿಬಿರದ ಕ್ರಾಲ್‌ನಲ್ಲಿ ದುರ್ಬಲ, ಗಾಯಗಳಿಂದ ಬಳಲುತ್ತಿರುವ ದೃಶ್ಯ ಸ್ಥಳೀಯರ ಹೃದಯವನ್ನು ಕಲುಕುತ್ತಿದೆ. “ಕಾಡಿನ ರಾಜನನ್ನು ನರಕಯಾತನೆ ಅನುಭವಿಸುವಂತೆ ಮಾಡಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಿಸಿಸಿಎಫ್ ಭೇಟಿಯಿಂದ ಸಮಸ್ಯೆಗೆ ಬೆಳಕು ಚೆಲ್ಲಿದರೂ, ಶಿಬಿರದಲ್ಲಿ ಆನೆಗಳಿಗೆ ಬೇಕಾದ ವೈದ್ಯಕೀಯ, ಪೌಷ್ಠಿಕ ಆಹಾರ ಮತ್ತು ಆರೋಗ್ಯಪೂರ್ಣ ನಿರ್ವಹಣೆ ತಕ್ಷಣ ಜಾರಿಗೆ ಬರಬೇಕು ಎಂದು ತಜ್ಞರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ “ಆನೆ ಸಂರಕ್ಷಣೆ” ಎಂಬ ಶಿಬಿರದ ಉದ್ದೇಶವೇ ಪ್ರಶ್ನಾರ್ಥಕವಾಗಲಿದೆ.

ಆನೆಗಳ ಆರೈಕೆಯಲ್ಲಿ ನಿರ್ಲಕ್ಷ್ಯ? ಸಕ್ರೆಬೈಲು ಆನೆ ಶಿಬಿರದಲ್ಲಿ ನೋವಿನಿಂದ ನರಳುತ್ತಿರುವ ವಿಕ್ರಾಂತ ಆನೆ ಎಂದು ನಿಮ್ಮ ಮಲ್ನಾಡ್ ಟೈಮ್ಸ್ ವರದಿ ಮಾಡಿತ್ತು ,

Leave a Comment